ರಸ್ತೆ ದುರಸ್ಥಿಗೆ ಮಲೆನಾಡಿಗರಿಂದ ಸಿಎಂಗೆ ಮನವಿ

ರಸ್ತೆ ದುರಸ್ಥಿ ಮಾಡಿಕೊಂಡುವಂತೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಅನಗೋಡು ಗ್ರಾಮಸ್ಥರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಗ್ರಾಮದ ಜನರು, ಮಕ್ಕಳ ಓಡಾಟಕ್ಕೂ ತೀವ್ರ ಸಮಸ್ಯೆಯಾಗಿದೆ ರಸ್ತೆಗೆ ಜಲ್ಲಿ ಹಾಕಿ ಹೋದವರು ಮತ್ತೆ ಈ ಕಡೆ ತಿರುಗಿಯೂ ನೋಡಿಲ್ಲ. ವಾಹನ ಓಡಾಡುವಂತಿಲ್ಲ, ಕುಡಿಯೋಕೆ ನೀರಿಲ್ಲ ಹೀಗೆ ಹತ್ತಾರು ಸಮಸ್ಯೆಗಳಿವೆ. ಶಾಸಕರು, ಅಧಿಕಾರಿಗಳು, ಜಿಪಂ-ತಾಪಂ ಸದಸ್ಯರು ನಮ್ಮ ಕಷ್ಟಗಳಿಗೆ ಸ್ಪಮದಿಸುತ್ತಿಲ್ಲ ಸ್ಪಂದಿಸುತ್ತಿಲ್ಲ. ನೀವಾದ್ರು ನಮ್ಮ ಕಷ್ಟಕ್ಕೆ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ. ಸ್ಪಂದಿಸದಿದ್ದರೆ ಮುಂದಿನ ಎಲ್ಲಾ ಚುನಾವಣೆ ಬಹಿμÁ್ಕರ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.