ಪವರ್ ಸ್ಟಾರ್ನಂತೆ ನೇತ್ರಾದಾನ ಮಾಡಿದ 40 ಮಂದಿ ಅಭಿಮಾನಿಗಳು
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾದಿ ಲಕ್ಷಾಂತರ ಮಂದಿಗೆ ಮಾದರಿಯಾಗಿದ್ದು, ಅಭಿಮಾನಿಗಳು ಸೇರಿದಂತೆ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ. ಈ ಸಾಕ್ಷಿ ಎಂಬಂತೆ ಗದಗದ ಗಜೇಂದ್ರಗಡ ತಾಂಡದ 40ಕ್ಕೂ ಹೆಚ್ಚು ಜನರು ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ.ನಟ ಸಾರ್ವಭೌಮ ಡಾ.ರಾಜ್ಕುಮಾರ್ ವಿಧಿವಶರಾದಾಗ ನೇತ್ರದಾನ ಮಾಡಿದಂತೆ, ನಟ ಪುನೀತ್ ರಾಜ್ಕುಮಾರ್ ಕೂಡ ನೇತ್ರ ದಾನ ಮಾಡಿ ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದಾರೆ. ಇದರಿಂದ ಪ್ರೇರೇಪಿತರಾದ ಜಿಲ್ಲೆಯ ಗಜೇಂದ್ರಗಡ ಬಂಜಾರ ಸಮುದಾಯದ 40ಕ್ಕೂ ಅಧಿಕ ಜನರು ಕಣ್ಣು ದಾನ ಮಾಡಲು ಮುಂದಾಗಿದ್ದಾರೆ. ಗಜೇಂದ್ರಗಡದಲ್ಲಿ ನಡೆದ 11ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಅಪಾರ ಅಭಿಮಾನಿಗಳು ಕೇವಲ ನೇತ್ರದಾನ ಮಾಡುವುದು ಮಾತ್ರವಲ್ಲದೆ, ಅಪ್ಪುಗೆ ವಿಶೇಷ ಪೂಜೆ,ಅನ್ನ ಸಂತರ್ಪಣೆ ಕೂಡ ಮಾಡಿದ್ದಾರೆ.