ಗದಗ ಅತ್ಯಾಚಾರ ಪ್ರಕರಣ
ಗದಗ
ಅತ್ಯಾಚಾರ ಪ್ರಕರಣ ಖಂಡಿಸಿ ಕೈ ನಾಯಕರ ಮೊಂಬತ್ತಿ ಜಾಥಾ
ರಾಷ್ಟ್ರ, ರಾಜ್ಯದಲ್ಲಿ ಮಹಿಳೆಯರ ಹಾಗೂ ಅಪ್ರಾಪ್ತರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಬುಧವಾರ ಕಾಂಗ್ರೆಸ್, ಬಂಜಾರ ಸಮುದಾಯ ವತಿಯಿಂದ ಮೊಂಬತ್ತಿ ಜಾಥಾ ನಡೆಸಿದರು. ನಂತರ ಗಜೇಂದ್ರಗಡದ ಕೆ ಕೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿದರು. ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಶಾಂತ ರಾಠೋಡ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಅಪರಾಧಿಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದು ರಾಜಕೀಯವಾಗಿ ಮಾಡುತ್ತಿರುವ ಆರೋಪವಲ್ಲ, ಎನ್ಸಿಆರ್ಬಿ ನೀಡಿದ ಅಂಕಿ ಅಂಶಗಳಲ್ಲಿ ಇದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.