ಗುಜರಾತ್‌: BJP ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ 60 ಲಕ್ಷ ಜನಸಂಖ್ಯೆಯ ಮಾಲ್ಧಾರಿ ಸಮುದಾಯ!

ಗುಜರಾತ್‌: BJP ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ 60 ಲಕ್ಷ ಜನಸಂಖ್ಯೆಯ ಮಾಲ್ಧಾರಿ ಸಮುದಾಯ!

ಆಡಳಿತಾರೂಢ ಬಿಜೆಪಿ ಸರ್ಕಾರವು ತಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿರುವ ಗುಜರಾತ್ ಮಾಲ್ಧಾರಿ ಮಹಾಪಂಚಾಯತ್ (ಜಿಎಂಎಂ) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಸಮುದಾಯಕ್ಕೆ ಕರೆ ನೀಡಿದೆ. ಜಿಎಂಎಂ ರಾಜ್ಯದ ಜಾನುವಾರು ಸಾಕಣೆದಾರರ ಒಕ್ಕೂಟ ಸಂಘಟನೆಯಾದ್ದು, ಗುಜರಾತ್‌‌ನಲ್ಲಿ ಮಾಲ್ಧಾರಿ ಜನಸಂಖ್ಯೆ ಸುಮಾರು 61 ಲಕ್ಷ ಇದೆ ಎಂದು ಸಂಘಟನೆ ಪ್ರತಿಪಾದಿಸಿದೆ.

ಮೆಹ್ಸಾನಾದಲ್ಲಿ ಸೋಮವಾರ ಸಭೆ ನಡೆಸಿದ ಗುಜರಾತ್ ಮಾಲ್ಧಾರಿ ಮಹಾಪಂಚಾಯತ್‌ನ ವಕ್ತಾರ ನಾಗಜಿಭಾಯ್ ದೇಸಾಯಿ ನೀಡಿದ ಹೇಳಿಕೆಯಲ್ಲಿ, ಕಳೆದ ಒಂದೂವರೆ ವರ್ಷಗಳಿಂದ ಬಿಜೆಪಿ ಸರ್ಕಾರದ ಬಗ್ಗೆ ಸಮುದಾಯವು ತೀವ್ರ ಅಸಮಾಧಾನ ಹೊಂದಿರುವುದರಿಂದ ಅದನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವದಲ್ಲಿ ಮತದಾನದ ಶಕ್ತಿಯನ್ನು ತೋರಿಸುತ್ತೇವೆ ಎಂದು ಹೇಳಿದೆ.