ಶಾಂತಿನಗರ ಶಾಸಕ ಪಕ್ಷಪಾತ ಧೋರಣೆ ಮತ್ತು ಬಿ.ಬಿ.ಎಂ.ಪಿ.ಅಧಿಕಾರಿಗಳ ಬೇಜವದ್ದಾರಿ | Bangalore | Vaccine |
ಶಾಂತಿನಗರ ವಿಧಾನಸಭಾ ಕ್ಷೇತ್ರ ಮಂಡಲ ಬಿ.ಜೆ.ಪಿ.ವತಿಯಿಂದ ಕೊವಿಡ್-19ಲಸಿಕಾ ಅಭಿಯಾನ ವಿತರಣೆಯಲ್ಲಿ ಪಕ್ಷಪಾತ ಕೇಂದ್ರ ಸರ್ಕಾರ ಯೋಜನೆಯನ್ನ ಕಾಂಗ್ರೆಸ್ ಪಕ್ಷದ ಪ್ರಚಾರ ಬಳಕೆ ಮತ್ತು ಪ್ರಧಾನಿ ನರೇಂದ್ರಮೋದಿ ರವರ ಪೋಟೋ ಬಳಸದೇ ಹಾಕದೇ ಇರುವುದು ,ಬಿ.ಬಿ.ಎಂ.ಪಿ.ಅಧಿಕಾರಿಗಳ ಬೇಜವದ್ದಾರಿ ಖಂಡಿಸಿ ಮೆಯೋ ಹಾಲ್ ಜಂಟಿ ಆಯುಕ್ತರ ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಮಹಾಪೌರರಾದ ಗೌತಮ್ ಕುಮಾರ್ ರವರು ,ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಲಕ್ಷ್ಮೀನಾರಾಯಣ್(ಗುಂಡಣ್ಣ) ಮಂಡಲ ಅಧ್ಯಕ್ಷರಾದ ಶಿವಕುಮಾರ್ ,ಬೆಂಗಳೂರು ನಗರ ಕೇಂದ್ರ ಜಿಲ್ಲಾ ಬಿ.ಜೆ.ಪಿ.ಯುವ ಮೋರ್ಚಾ ಅಧ್ಯಕ್ಷರಾದ ಅಭಿಲಾಶ್ ರೆಡ್ಡಿ ರವರು ನೂರಾರು ಬಿ.ಜೆ.ಪಿ.ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಮಹಾಪೌರರಾದ ಗೌತಮ್ ಕುಮಾರ್ ರವರು ಮಾತನಾಡಿ ಕೊವಿಡ್-19ಲಸಿಕೆ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ಪ್ರಜೆಗೆ ಕೊವಿಡ್ ಲಸಿಕೆ ಸಿಗಬೇಕು ಎಂದು ಯೋಜನೆ ಜಾರಿಗೆ ತಂದರು ಅದರೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಎ.ಹ್ಯಾರೀಸ್ ರವರ ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸಿ ,ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ಮತ್ತು ಲಸಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮಗೆ ಬೇಕಾದವರಿಗೆ ಲಸಿಕೆ ಕೊಡುಸುತ್ತಾರೆ.ಕೊವಿಡ್-19ಲಸಿಕೆ ಕೇಂದ್ರ ದಲ್ಲಿ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಬಾವಚಿತ್ರ ಹಾಕದೇ ,ಶಾಸಕರ ಪೋಟೋ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ ,ಪ್ರೋಟೋ ಕಾಲ್ ಉಲ್ಲಂಘನೆ ಮಾಡಿದ್ದಾರೆ ಮತ್ತು ಕೊವಿಡ್ ಲಸಿಕೆಯನ್ನು ಶಾಸಕರ ಮನೆಯಲ್ಲಿ ಹಾಕುತ್ತಿದ್ದಾರೆ .