ರಸ್ತೆ ಸ್ವಚ್ಛಗೊಳಿಸುವ ಐ ಕ್ಲೀನ್ ಯಂತ್ರಕ್ಕೆ ಶಾಸಕ ಚಾಲನೆ | Kolar |

ರಾಜ್ಯದಲ್ಲೇ ಮೊದಲ ಬಾರಿಗೆ ರಸ್ತೆ ಸ್ವಚ್ಛಗೊಳಿಸುವ ರಸ್ತೆ ಐ ಕ್ಲೀನ್ ಯಂತ್ರವನ್ನು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿ, ಯಂತ್ರವನ್ನು ಬಳಸಿ ಪಟ್ಟಣವನ್ನು ಸ್ವಚ್ಛಗೊಳಿಸಲು ಮುಂದಾಗಿರುವುದು ಸಂತಸದ ವಿಷಯ. ಈ ಯಂತ್ರಕ್ಕೆ ಪೆಟ್ರೊಲ್, ಡೀಸಲ್ ಬೇಡ, ಮಾನವನ ಶಕ್ತಿಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರದೇಶ ಸ್ವಚ್ಛ ಮಾಡಬಹುದಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಲಿ ಸದಸ್ಯ ಕೆ.ಚಂದ್ರಾರೆಡ್ಡಿ ಮಾತನಾಡಿ, ಪುರಸಭೆಯ ಪ್ರಯತ್ನವನ್ನು ಶ್ಲಾಘಿಸಿದರು. ಇನ್ನೂ ಯಂತ್ರ ಸರಬರಾಜು ಕಂಪನಿ ನಿರ್ದೇಶಕ ಪ್ರಕಾಶ್ ಹೊಸದುರ್ಗ ಮಾತನಾಡಿ, ಯಂತ್ರ ಬಳಕೆಯಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು. ಈ ವೇಳೆ ಪುರಸಭೆ ಅಧ್ಯಕ್ಷೆ ಗಂಗಮ್ಮ ರಂಗರಾಮಯ್ಯ, ಮುಖ್ಯಾಧಿಕಾರಿ ಯಶವಂತ್, ಪರಿಸರ ಅಭಿಯಂತರ ರವೀಂದ್ರನಾಥ್, ಇಂಜಿನಿಯರ್ ರಾಜೇಂದ್ರ, ಆರೋಗ್ಯ ನಿರೀಕ್ಷಕ ಗೋವಿಂದರಾಜು, ಸದಸ್ಯರಾದ ಪ್ರಭಾಕರ್, ಆರೋಕ್ಯರಾಜನ್, ಯಂತ್ರ ಸರಬರಾಜು ಮಾಡಿದ ಕಂಪನಿಯ ನಿರ್ಧೇಶಕ ಪ್ರಕಾಶ್ ಮೊದಲಾದವರಿದ್ದರು.