ಬಂಡೀಪುರದಲ್ಲೀಗ ಹುಲ್ಲಿಗಳದ್ದೇ ಕಾರುಬಾರು; ಪ್ರವಾಸಿಗರಿಗೆ ಸಂತಸ | Gundlupete |
ಸುಪ್ರಸಿದ್ಧ ವನ್ಯಜೀವಿತಾಣ ಬಂಡೀಪುರದಲ್ಲೀಗ ಕಾಡು ಪ್ರಾಣಿಗಳ ದರ್ಶನ ಹೆಚ್ಚಾಗತೊಡಗಿದೆ. ಸಫಾರಿಗೆ ಬಂದ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿರುವ ವ್ಯಾಘ್ರಪಡೆ ನೋಡುಗರ ಕಣ್ಮನ ಸೆಳೆಯುತ್ತಿವೆ. ನಿನ್ನೆಯμÉ್ಟೀ ತಾಯಿಯೊಂದಿಗೆ ಎರಡು ಗಂಡು ಹುಲಿಗಳು ಪ್ರವಾಸಿಗರಿಗೆ ಕಾಣಿಸಿದ್ದು, ಒಂದೆಡೆ ಗಾಂಭೀರ್ಯದಿಂದ ನಡೆದು ಬರುತ್ತಿರುವ ಹುಲಿಗಳು, ಅನತಿ ದೂರದಲ್ಲೇ ಜಲಕ್ರೀಡೆಯನ್ನಾಡುತ್ತಿರುವುದು ಪ್ರವಾಸಿಗರ ಕ್ಯಾಮರದಲ್ಲಿ ಸೆರೆಯಾಗಿದ್ದು ಒಮ್ಮೆಯಾದರೂ ಬಂಡೀಪುರಕ್ಕೆ ಭೇಟಿ ನೀಡಿ ವನ್ಯಜೀವಿತಾಣದ ಸೌಂದರ್ಯವನ್ನು ಸವಿಯಬೇಕು ಎಂದೆನಿಸುವಂತಿದೆ. ಬಂಡೀಪುರ ರಾಯಭಾರಿ ಎಂದೇ ಖ್ಯಾತಿಯಾಗಿದ್ದ ಪ್ರಿನ್ಸ್ ಹುಲಿಯ ಸಾವಿನ ಬಳಿಕ ಪ್ರವಾಸಿಗರಿಗೆ ಹುಲಿಗಳ ದರ್ಶನ ಕಡಿಮೆಯಾಗಿತ್ತು, ಇನ್ನು ಕೆಕ್ಕನಹಳ್ಳ ಸುತ್ತಲಿನ ವ್ಯಾಪ್ತಿಯಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಮಾಯಾರ್ ರಾಣಿ ಎಂಬ ಹುಲಿಯು ಕಾಣಿಸದೆ ಪ್ರವಾಸಿಗರಿಗೆ ನಿರಾಶೆಯಾಗಿತ್ತು ಆದ್ರೆ ಈಗ ಕಾಡಿನಲ್ಲಿ ಸುಂದರಿ ಎಂಬ ಹೆಣ್ಣು ಹುಲಿಯು ತನ್ನೆರಡು ಮೂರು ವರ್ಷದ ಗಂಡು ಮರಿಗಳೊಂದಿಗೆ ಸಂಚರಿಸುತ್ತಿರುವುದರಿಂದ ಪ್ರವಾಸಿಗರಿಗೆ ತುಂಬಾ ಸಂತಸ ತಂದಿದೆ.