ಲಸಿಕಾ ಅಭಿಯಾನ ಭಾರತದ ಬಹುದೊಡ್ಡ ಸಾಧನೆ ಸಚಿವ ಹಾಲಪ್ಪ ಆಚಾರ್
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿಯ ಫಲವಾಗಿ ವಿಶ್ವದಲ್ಲಿ 100 ಕೋಟಿ ಕೋವಿಡ ಲಸಿಕೆ ನೀಡಿದ ಮುಂಚೂಣಿಯಲ್ಲಿ ಭಾರತದ ಬಹುದೊಡ್ಡ ಸಾಧನೆಯಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ. ಕೊಪ್ಪಳದಲ್ಲಿ ಇಂದು ಸುದ್ಧಿಗಾರ ರೊಂದಿಗೆ ಮಾತನಾಡಿದ ಅವರು ಲಸಿಕೆಯ ಬಗ್ಗೆ ಕಾಂಗ್ರೆಸ್ ಗೊಂದಲ ಉಂಟು ಮಾಡಿದ್ದಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 788205 ಲಸಿಕೆ ನೀಡಲಾಗಿದ್ದು, ಎರಡನೆಯ ಡೋಸ್ ಶೇ 47 ರಷ್ಟು 358494 ಲಸಿಕೆ ನೀಡಲಾಗಿದೆ.ಒಂದು ವಾರದೊಳಗೆ ಕೊವಿಡ್ ಸಾವಿನವರಿಗೆ ಪರಿಹಾರ ನೀಡಲಾಗುವುದು. ಕೊಪ್ಪಳ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯಾಗಿದೆ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುತ್ತೇನೆ.ಕಾಂಗ್ರೆಸ್ ಈ ಹಿಂದೆ ಪೊಲಿಯೋ ಲಸಿಕೆಯನ್ನು ಆಮುದು ಮಾಡಿಕೊಳ್ಳು ತ್ತಿದ್ದರು. ಇನ್ನೂ ಕೋವಿಡ್ ಲಸಿಕೆ ವಿತರಣೆ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಇದೆ ಸಂದರ್ಭದಲ್ಲಿ ತಿಳಿಸಿದರು.