ಮಹೇಶ ಅಂಗಡಿ ಅವರಿಗೆ ಡಾಕ್ಟರೇಟ್
ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ಉಪಾಧ್ಯಕ್ಷ ಹಾಗೂ ರಾಜ್ಯ ಖಜಾನೆ ಇಲಾಖೆಯ ಉದ್ಯೋಗಿ ಮಹೇಶ ಅಂಗಡಿ ಅವರಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ” ಡಾಕ್ಟರ್ ಆಫ್ ಫಿಲೋಶೋಪಿ” ಪದವಿಯನ್ನು ಘೋಷಿಸಿದೆ. ಮಹೇಶ ಅವರು ಡಾ. ಎಚ್. ಐ. ತಿಮ್ಮಾಪುರ ಮಾರ್ಗದರ್ಶನದಲ್ಲಿ ಮಂದಿಸಿದ ಬೆಳಗಾವಿ ಜಿಲ್ಲೆಗಳ ಸಂಸ್ಥಾನಗಳ ಸಾಂಸ್ಕೃತಿಕ ಅಧ್ಯಯನ ” ಎಂಬ ಮಹಾಪ್ರಭಂದಕ್ಕೆ ಡಾಕ್ಟರೇಟ್ ಪದವಿಯನ್ನು ಪುರಸ್ಕರಿಸಲಾಯಿತು. ಕ್ರೀಡಾರಂಗದಲ್ಲೂ ತಮ್ಮ ಆಳವಾದ ಪ್ರತಿಭೆಯನ್ನು ಅಚ್ಚೋತ್ತಿದ. ಡಾ. ಮಹೇಶ ಅಂಗಡಿ ಅವರ ಸಾಧನೆಗೆ ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ಸಂಸ್ಥಾಪಕ ಅಧ್ಯಕ್ಷ ಕೊಡಕ್ಕಲ್ ಶಿವಪ್ರಸಾದ್ ಅಭಿನಂದಿಸಿದ್ದಾರಲ್ಲದೆ ನಮ್ಮ ಸಂಸ್ಥೆಗೆ ಗೌರವ ತಂದಿರುವ ಅವರ ಪ್ರತಿಭೆಗೆ ಶತಕೋಟಿ ನಮನಗಳನ್ನು ಸಲ್ಲಿಸಿದ್ದಾರೆ.