'ಮೋದಿ' ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಮುಂದಾದ 'VISL' ಕಾರ್ಮಿಕರು ಪೊಲೀಸ್ ವಶಕ್ಕೆ
ಶಿವಮೊಗ್ಗ : ಭದ್ರಾವತಿಯಲ್ಲಿ ವಿಐಎಸ್ ಎಲ್ ಕಾರ್ಖಾನೆ ಮುಚ್ಚಿರುವುದನ್ನು ವಿರೋಧಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಶಿವಮೊಗ್ಗದಲ್ಲಿ ನಡೆಯಲಿರುವ ಮೋದಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಭದ್ರಾವತಿಯಿಂದ ಶಿವಮೊಗ್ಗದವರೆಗೆ ಮೆರವಣಿಗೆ ಮಾಡಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ಈ ಹಿಂದೆ ಕಾರ್ಮಿಕರು ಹೇಳಿಕೆ ನೀಡಿದ್ದರು. ಹೀಗಾಗಿ ಮುಷ್ಕರ ನಿರತಾ ಸ್ಥಳದಿಂದ ಪ್ರತಿಭಟನಾಗಾರರು ತೆರಳದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಇಂದು ಬೆಳಗ್ಗೆ 20 ಕ್ಕೂ ಹೆಚ್ಚು ಕಾರ್ಮಿಕ ಮುಖಂಡರನ್ನು ವಶಕ್ಕೆ ಪಡೆಯಲಾಗಿದ್ದು, ಹೊಳೆಹೊನ್ನೂರು ಠಾಣೆ ಕಡೆ ಕರೆದೊಯ್ಯಲಾಗಿದೆ.
ನಗರದಲ್ಲಿರುವಂತ ವಿಐಎಸ್‌ಎಲ್ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಮುಚ್ಚದೇ ಉಳಿಸಿಕೊಂಡು ಬಂಡವಾಳ ತೊಡಗಿಸಬೇಕೆಂದು ಒತ್ತಾಯಿಸಿ, ಇತ್ತೀಚೆಗೆ ಭದ್ರಾವತಿ ನಗರ ಬಂದ್ ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದವು.