ಹಳ್ಳಿಗಳಿಗೆ ಹೋಗಿ ವ್ಯಾಕ್ಸಿನ್ ಬಗ್ಗೆ ಜಾಗ್ರತೆ ಮೂಡಿಸಿದ ತಹಶಿಲ್ದಾರ
ಭಾರತವು ದಾಖಲೆಯ 100 ಕೋಟಿ ಲಸಿಕೆ ಡೋಸ್ ನೀಡಿರುವ ಸಂಭ್ರಮಾಚರಣೆಯಲ್ಲಿದೆ. ಈ ನಿಟ್ಟಿನಲ್ಲಿ ಧಾರವಾಡತಹಸೀಲ್ದಾರ್ ಸಂತೋಷ್ ಬಿರಾದರ ಗ್ರಾಮಗಳಿಗೆ ತೆರಳಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಜನರಿಗೆ ತಿಳಿ ಹೇಳುವ ಕೆಲಸ ಮಾಡಿದರು. ಧಾರವಾಡ ತಾಲೂಕಿನ ಬೆನಕನಕಟ್ಟಿ, ಉಪ್ಪಿನಬೇಟಗೇರಿಯ ಗ್ರಾಮಗಳಲ್ಲಿ ಮನೆ ಮನೆಗೆ ಹೋಗಿ ವ್ಯಾಕ್ಸಿನ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು .ಈ ಲಸಿಕಾ ಜಾಗೃತಿ ಅಭಿಯಾನದಲ್ಲಿ ತಾ.ಪಂ.ಇಓ ರಾಘವೇಂದ್ರ , ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.