ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸಿದ ಹೋರಾಟದಲ್ಲಿ ಮೃತಪಟ್ಟ ರೈತರ ಲೆಕ್ಕವನ್ನು ಯಾರು ಇಡಬೇಕು? ಜನನ-ಮರಣ ದಾಖಲೆ ನಿರ್ವಹಣೆ ಸರ್ಕಾರವೇ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಮೃತ ರೈತರ ದಾಖಲೆ ಇಲ್ಲ ಎನ್ನುವುದು ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಮೂರ್ಖತನ ಎಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಹೇಳಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ಜಾರಿಗೆ ತರುವಾಗಲೂ ಲೋಕಸಭೆಯಲ್ಲಿ ಚರ್ಚೆ ಮಾಡಲಿಲ್ಲ. ಈಗ ವಾಪಸ್ಸು ಪಡೆಯುವಾಗಲೂ ಚರ್ಚೆ ಮಾಡದೇ ಸರ್ವಾಧಿಕಾರ ತೋರುತ್ತಿರುವ ನರೇಂದ್ರ ಮೋದಿ ಅವರ ಸರ್ಕಾರ ಸಂಸತ್ತಿನಲ್ಲಿ ಈ ಕುರಿತು ಪ್ರಜಾಪ್ರಭುತ್ವ ನೆಲೆಯಲ್ಲಿ ನಡೆದುಕೊಳ್ಳುತ್ತಿಲ್ಲ. ಬದಲಾಗಿ ವಿಪಕ್ಷಗಳ 12 ಜನರನ್ನು ಅಮಾನತುಗೊಳಿಸುವುದು ಖಂಡನೀಯ. ಈ ವಿಷಯವಾಗಿ ಪ್ರಧಾನ ಮಂತ್ರಿಗಳು ದೇಶದ ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ದಾನಪ್ಪ ಕಬ್ಬೇರ, ಎಚ್ ಎಂ ರಾಜು.ಅಳ್ಳಾವರ ಬ್ಲಾಕ್ ಅದ್ಯಕ್ಷರು ಸುರೇಶಗೌಡ ಕರಿಗೌಡರ್, ಮಾಜಿ ಸಚಿವರ ಆಪ್ತ ಸಹಾಯಕರಾದ ಶ್ರೀಕಾಂತ್ ಗಾಯಕವಾಡ.ಪಟ್ಟಣ ಪಂಚಾಯತ ಸದಸ್ಯರಾದ ಮದು ಬಡಸ್ಕರ, ಛಗನ ಪಟೇಲ್, ಅಮೂಲ ಗುಂಜಿಕರ, ರಮೇಶ್ ಕುನ್ನೂರಕರ, ಲಿಯೋ ಬರೋಟ್ಟೋ, ಬಾಗ್ಯವತಿ ಕುರಬರ್, ಪರಮೇಶ್ವರ ತೆಗೂರ್ ಗ್ರಾಮ ಪ ಸದಸ್ಯರು ತೇಜು ದೋಡಮನಿ, ಪಾರುಕ ಅಂಬಡಗಟ್ಟಿ, ಮಾರುತಿ ಬಾಂಗಡಿ, ಮಂಜುನಾಥ್ ಕುಳೇನವರ್, ಸ್ನೇಹಶ್ರೀ ಕಿತ್ತೂರು ಮಲ್ಲನಗೌಡ ಪಾಟೀಲ್ ಬಸವರಾಜ್ ಮರಿತ್ತಮನವರ, ವಿರೇಶ ರೇಶ್ಮಿ ಅನ್ವರಖಾನ ಬಾಗೇವಾಡಿ, ಹಾಸನ್ ಅಲ್ಲಿ ಶೇಖರ್, ಹನುಮಂತ ಸಿಂದೆ ಕೇದಾರಿ ಮಾಳಪ್ಪ ನವರ್, ನಿತಿನ ಕಲಾಲ, ಮಕ್ಬುಲ್ ಸೈಯದ್ ಶ್ರೀಕಾಂತ್ ಸತ್ತಾರ ಬಾತಕಂಡೆ ವಿನಾಯಕ ಕುರಬರ, ಮನು ಬಡಸ್ಕರ, ಶಬಿರ ಬಿಜಾಪೂರ, ಮಹಮ್ಮದ್ ಬಾಗವಾನ ಸುರೇಶ ಜಾದವ ಮುಂತಾದವರು ಭಾಗವಹಿಸಿದ್ದರು