ಗಣೇಶನಿಗೆ ಭಕ್ತಿ, ಶ್ರದ್ಧೆ ಸಂಭ್ರಮದ ವಿದಾಯ

ಹತ್ತು ದಿನಗಳ ಕಾಲ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಪ್ರತಿಷಾ್ಠಪಿಸಲಾಗಿದ್ದ ಶ್ರೀ ಗಣೇಶ ವಿಗ್ರಹಗಳನ್ನು ಆಯಾ ಸಮಿತಿಯವರು ಶೃಂಗಾರ ಮಾಡಿದ ವಾಹನಗಳಲ್ಲಿ ಶ್ರೀ ಗಣೇಶ ವಿಗ್ರಹ ಪ್ರತಿಸ್ಥಾಪನೆ ಮಾಡಿ ಭಕ್ತಿಯಿಂದ ವಿರ್ಜನಾ ಕರ್ಯಕ್ರಮದಲ್ಲಿ ಯುವಕರು, ಮಹಿಳೆಯರು ವಯೋವೃದ್ಧರು ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಮಹಿಳೆಯರು ಆರತಿ ಬೆಳಗಿ ನೈವೇದ್ಯೆ ರ್ಪಿಸಿ ತಮ್ಮ ಹರಕೆ ಸರ್ಪಿಸಿ ಪುನೀತರಾದರೆ, ಯುವಕರು ವಿವಿಧ ರೀತಿಯ ಪಟಾಕಿಗಳನ್ನು ಸಿಡಿಸಿ ಸಂಭ್ತಮಪಟ್ಟರು ವಿವಿಧ ಬಡಾವಣೆಗಳಲ್ಲಿ ಸ್ಥಾಪಿಸಿದ ಗಣೇಶ ವಿಗ್ರಹಗಳು ದರ್ಗದ ಬೈಲ, ಬ್ರಾಡವೇ, ಮೆದಾರ ಓಣಿ, ದಾಜಿಬಾನ ಪ್ರೇಟ, ಸಂಗೊಳ್ಳಿ ರಾಯಣ್ಣ ವೃತ್ತ ಬಸವೇಶ್ವರ ವನ ಮುಖಾಂತರ ಇಂದಿರಾ ಗಾಜಿನ ಮನೆ ಆವರಣದಲ್ಲಿ ಇರುವ ಶ್ರೀ ಗಣೇಶ ಭಾವಿ ಹಾಗೂ ಹೊಸೂರಿನಲ್ಲಿರುವ 16 ನೇ ನಂ. ಶಾಲೆ ಆವರಣದಲ್ಲಿ ಇರುವ ಶ್ರೀ ಗಣೇಶ ಬಾವಿಯಲ್ಲಿ ಶ್ರೀ ಗಣೇಶ ವಿಗ್ರಹಗಳ ವಿರ್ಜನೆಯು ಭಕ್ತಿ, ಶ್ರದ್ಧೆಯಿಂದ ಜರುಗಿತು. ಗಣೇಶೊತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಜೆಥಿಯಾ ಫೌಂಡೇಶನ ಚರ್ಮನರಾದ ಶ್ರೀ ಜಿತೇಂದ್ರ ಮಜೆಥಿಯಾ, ದರ್ಗದ ಬೈಲ ಹುಬ್ಬಳ್ಳಿ ಅಧ್ಯಕ್ಷರಾದ ಶ್ರೀ ಮಹೇಶ್ ಗೌಳಿ,ಹಾಗೂ ಶಿವು ಕಾದಪ್ಪನವರ, ಸಮಾರಂಭದ ಅಧ್ಯಕ್ಷತೆಯನ್ನು ಮಹಾಮಂಡಳದ ಅಧ್ಯಕ್ಷರಾದ ಶ್ರೀ ಮೋಹನ ಲಿಂಬಿಕಾಯಿ ವಹಿಸಿದ್ದರು. ಶ್ರೀ ಗಣಪತಿ ವಿಗ್ರಹಗಳ ವಿರ್ಜನೆಗೆ ಪೂಜಾ ಸಮಾರಂಭವನ್ನು ಮಹಾಮಂಡಳದ ಪದಾಧಿಕಾರಿಗಳು ಅತಿಥಿಗಳು ದೀಪ ಹಚ್ಚುವ ಮೂಲಕ ನೆರವೇರಿಸಿದರು