ಆಧಾರ್ ಕಾರ್ಡ್​ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ರೂ. 1000 ಶುಲ್ಕ ವಿರೋಧ; ದಾವಣಗೆರೆಯಲ್ಲಿ ಕಾರ್ಯಕರ್ತರ ಪ್ರತಿಭಟನೆ

ಆಧಾರ್ ಕಾರ್ಡ್​ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ರೂ. 1000 ಶುಲ್ಕ ವಿರೋಧ; ದಾವಣಗೆರೆಯಲ್ಲಿ ಕಾರ್ಯಕರ್ತರ ಪ್ರತಿಭಟನೆ

ದಾವಣಗೆರೆ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದ್ದಂತೆ ಬಿಜೆಪಿ ಸರ್ಕಾರಕ್ಕೆ ಪ್ರತಿಭಟನೆ ಬಿಸಿ ತಟ್ಟುತ್ತಿದೆ. ಇದೀಗ ಆಧಾರ್‌ ಕಾರ್ಡ್‌ ಗೆ ಪ್ಯಾನ್‌ ಕಾರ್ಡ್‌ ನ್ನು ಲಿಂಗ್‌ ಮಾಡುವ ಗಡುವು ಇದೇ ಶುಕ್ರವಾರ ಕೊನೆಗೊಳ್ಳಲಿದೆ. ಈ ಪ್ರಕ್ರಿಯೆಗೆ ಶುಲ್ಕ ವಿಧಿಸಲಾಗುತ್ತಿದೆ.

ಹೀಗಾಗಿ ಆದಾಯ ತೆರಿಗೆ ಇಲಾಖೆ ಕ್ರಮವನ್ನು ಖಂಡಿಸಿ ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಗರದ ವನ್‌ ಸೆಂಟರ್‌ ಎದುರು ಕಾರ್ಯಕರ್ತರು ಪ್ರತಿಭನೆ ನಡೆಸುತ್ತಿದ್ದಾರೆ. ಈ ವೇಳೆ ಕಾರ್ಯಕರ್ತರು ಕೈಯಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಗಳ ಪ್ರತಿಗಳನ್ನು ಹಿಡಿದುಕೊಂಡು ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ಇನ್ನು ಇದೇ ತಿಂಗಳು 31 ರಂದು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲು ದಿನಾಂಕ ಮುಕ್ತಾಯಗೊಳ್ಳಲಿದೆ. ಆ ದಿನದೊಳಗೆ ಮಾಡಿಸದಿದ್ದರೆ ಭಾರಿ ದಂಡ ಕಟ್ಟಬೇಕಾಗುತ್ತದೆ.1,000 ರೂ. ದಂಡದೊಂದಿಗೆ ಮಾರ್ಚ್‌ 31ರ ತನಕ ಪ್ಯಾನ್‌ - ಆಧಾರ್‌ ಲಿಂಕ್‌ ಮಾಡಲು ಅವಕಾಶವಿದೆ.

ಏಪ್ರಿಲ್‌ 1ರ ಬಳಿಕ ಪ್ಯಾನ್‌ ನಿಷ್ಕ್ರಿಯವಾಗಲಿದ್ದು, ಹೊಸ ಪ್ಯಾನ್‌ ಪಡೆದು ಲಿಂಕ್‌ ಮಾಡಲು 10,000 ರೂ. ದಂಡ ತೆರಬೇಕಾಗುತ್ತದೆ.ಮಾರ್ಚ್ 31ರೊಳಗೆ ನೀವು ಪ್ಯಾನ್‌ ಮತ್ತು ಆಧಾರ್‌ ಅನ್ನು ಲಿಂಕ್‌ ಮಾಡದಿದ್ದರೆ, ನಿಮ್ಮ ಪ್ಯಾನ್‌ ಕಾರ್ಡ್‌ ಏಪ್ರಿಲ್‌ 1ರಿಂದಲೇ ನಿಷ್ಕ್ರಿಯವಾಗುತ್ತದೆ.