ಮಾಜಿ ಸಚಿವ ಜಗದೀಶ ಶೆಟ್ಟರ ತರಾ ತುರಿಯಲ್ಲಿ ದಿಲ್ಲಿಗೆ ಹಾರಿದ್ದು ಏಕೆ

ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳಿಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ ಎರಡು ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆ ತೀವ್ರಗೊಂಡಿದೆ. ಬಿಜೆಪಿಯ ಹಾಲಿ ವಿಧಾನ ಪರಿಷತ ಸದಸ್ಯ ಪ್ರದೀಪ್ ಶೆಟ್ಟರ ಹಾಗೂ ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಪರಿಷತ ಗೆ ಕಳೆದ ಬಾರಿ ಆಯ್ಕೆಯಾಗಿದ್ದರು. ಆದರೆ ಇತ್ತೀಚಿಗೆ ಹಾನಗಲ್ ಉಪ ಸಮರದಲ್ಲಿ ಮಾನೆ ಗೆಲವು ಸಾಧಿಸಿರುವ ಹಿನ್ನಲೆಯಲ್ಲಿ ಈ ಸ್ಥಾನ ಖಾಲಿಯಾಗಿದೆ. ಈ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೇ ನಿರ್ನಾಯಕರಾಗಿದ್ದಾರೆ. ಅದರಲ್ಲೂ ಹಾವೇರಿ ಜಿಲ್ಲೆ ಅತೀ ಹೆಚ್ಚು ಮತದಾರರನ್ನು ಹೊಂದಿರುವುದು ಮತ್ತೊಂದು ವಿಶೇಷವಾಗಿದೆ. ಬಿಜೆಪಿ ಹಾಲಿ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಸಹೋದರ ಪ್ರದೀಪ್ ಶೆಟ್ಟರ ಎರಡನೇ ಬಾರಿ ಆಯ್ಕೆ ಬಯಿಸಿ ಟಿಕೇಟಗಾಗಿ ಅರ್ಜಿಸಲ್ಲಿಸಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಮೊದಲಿನಿಂದಲೂ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಲ್ಲಿ ಹೆಸರುವಾಸಿಯಾಗಿದೆ. ಇದಕ್ಕೆ ತಾಜಾ ಉದಾಹರಣೆ ಇತ್ತೀಚಿಗೆ ನಡೆದ ಹಾನಗಲ್ ಬೈ ಎಲೆಕ್ಷಣ. ಕುಟುಂಬ ರಾಜಕಾರಣ ಬಿಜೆಪಿ ಸಿದ್ಧಾಂತದ ವಿರುದ್ಧವಾಗಿರುವ ಉದ್ದೇಶದಿಂದ ಉದಾಸಿಯವರ ಕುಟುಂಬಕ್ಕೆ ಟಿಕೇಟ್ ನಿರಾಕರಿಸಲಾಯಿತು. ಈ ನಿಟ್ಟಿನಲ್ಲಿ ಮುಂಬರುವ ಪರಿಷತ್ ಚುನಾವಣೆಯಲ್ಲಿ ಪ್ರದೀಪ ಶೆಟ್ಟರ ಅವರಿಗೆ ಕೋಕ್ ನೀಡಿ ಹಾವೇರಿ ಬಿಜೆಪಿ ಮುಖಂಡ ಪಾಲಕ್ಷಗೌಡ ಅವರಿಗೆ ಮನೆ ಹಾಕಲಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.ಹಾಲಿ ಸದಸ್ಯ ಪ್ರದೀಪ ಶೆಟ್ಟರ ಮಾಜಿ ಸಚಿವ ಜಗದೀಶ ಶೆಟ್ಟರ ಅವರ ಸಹೋದರ ಆಗಿರುವುದರಿಂದ ಕುಟುಂಬ ರಾಜಕಾರಣದಡಿ ಟಿಕೆಟ್ ನಿರಾಕರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ದಿಲ್ಲಿಯಲ್ಲಿ ಮಾತುಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ಜಗದೀಶ್ ಶೆಟ್ಟರ ಆತಂಕಕ್ಕೆ ಒಳಗಾಗಿ ರಾತೋ ರಾತ್ರಿ ಬಿಜೆಪಿ ಹೈಕಮಾಂಡ್ ಭೇಟಿಗೆ ದಿಲ್ಲಿಗೆ ಹಾರಿದ್ದಾರೆ. ತಮ್ಮ ಸಹೋದರ ನಿಗೆ ಟಿಕೇಟ್ ನೀಡುವಂತೆ ಒತ್ತಾಯಿಸಿ ತಮ್ಮ ರಾಜಕೀಯ ಗಾಡಪಾಧರಗಳ ಮೂಲಕ ಒತ್ತಡ ತಂತ್ರ ಆರಂಭಿಸಿದ್ದಾರೆ. ಒಟ್ಟಾರೆ ಬಿಜೆಪಿ ಹೈಕಮಾಂಡ್ ವಂಶ ಪರಂಪರ ಆಡಳಿತಕ್ಕೆ ಬ್ರೇಕ್ ಹಾಕುತ್ತಾ ಅಥವಾ ಒತ್ತಡ ತಂತ್ರಕ್ಕೆ ಒಳಗಾಗುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ