ಕೋಟೆನಾಡಿನಲ್ಲಿ ನಡೆಯಿತು ಘೋರ ದುರಂತ

ಕೋಟೆನಾಡಿನಲ್ಲಿ ನಡೆಯಿತು ಘೋರ ದುರಂತ

ಚಿತ್ರದುರ್ಗ: ಹೊಸದುರ್ಗದ ವಿನಾಯಕ ಬಡಾವಣೆಯಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದ ವೃದ್ಧ ದಂಪತಿಯ ಕತ್ತು ಕೊಯ್ದು ಹತ್ಯೆಗೈದ ಘಟನೆ ನಡೆದಿದೆ. ವೃದ್ಧ ದಂಪತಿ ಮನೆಯಲ್ಲಿ ಇಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ದುಷ್ಕರ್ಮಿಗಳು ಅವರ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ. ಮೃತರನ್ನು ಪ್ರಭಾಕರ್‌ ಶೆಟ್ರು, ವಿಜಯ ಲಕ್ಷ್ಮೀ ಎಂದು ಗುರುತಿಸಲಾಗಿದೆ. ಹೊಸದುರ್ಗದಲ್ಲಿ ಅಡುಗೆ ಎಣ್ಣೆ ವ್ಯಾಪಾರ ಮಾಡುತ್ತಿದ್ದ ಪ್ರಭಾಕರ್‌‌ ಮೇಲಿನ ವೈಯುಕ್ತಿಕ ದ್ವೇಷದಿಂದ ಹತ್ಯೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.