: 'ಒಂದು ದೇಶ ಒಂದು ರಸಗೊಬ್ಬರ' ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ! |

: 'ಒಂದು ದೇಶ ಒಂದು ರಸಗೊಬ್ಬರ' ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ! |

ವದೆಹಲಿ: ಇಂದು ಪ್ರಾಧಾನಿ ನರೇಂದ್ರ ಮೋದಿ) ಅವರು ದೆಹಲಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022 ರ ಕಾರ್ಯಕ್ರಮದಲ್ಲಿ ʻಒಂದು ದೇಶ ಒಂದು ರಸಗೊಬ್ಬರʼ ಯೋಜನೆಗೆ ಚಾಲನೆ ನೀಡಿದರು.

ದೆಹಲಿಯಲ್ಲಿ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022 ಚಾಲನೆ ನೀಡಿದ ಮೋದಿ ಅವರು ʻಒಂದು ದೇಶ ಒಂದು ರಸಗೊಬ್ಬರʼ ಯೋಜನೆಗೂ ಚಾಲನೆ ನೀಡಿದರು.
ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್‍ಪಿಕೆ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಿದರು.
ಈ ಯೋಜನೆಯಡಿಯಲ್ಲಿ ಕಂಪನಿಗಳು ಎಲ್ಲಾ ಸಬ್ಸಿಡಿ ರಸಗೊಬ್ಬರಗಳನ್ನು ಏಕ ಬ್ರಾಂಡ್ 'ಭಾರತ್' ಅಡಿಯಲ್ಲಿ ಮಾರಾಟ ಮಾಡುವುದು ಕಡ್ಡಾಯವಾಗಿದೆ.

'ಒನ್ ನೇಷನ್ ಒನ್ ಗೊಬ್ಬರ' ಯೋಜನೆಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ, 'ಈಗ, ಏಕರೂಪದ ಗುಣಮಟ್ಟದ ಯೂರಿಯಾವನ್ನು ಒಂದೇ ಹೆಸರಿನಲ್ಲಿ ಮತ್ತು ಒಂದೇ ಬ್ರಾಂಡ್‌ನಲ್ಲಿ ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬ್ರ್ಯಾಂಡ್ ಭಾರತ್ ಆಗಿದೆ. ಇಂದು, ಒಂದು ರಾಷ್ಟ್ರ ಒಂದು ರಸಗೊಬ್ಬರ ರೂಪದಲ್ಲಿ , ಭಾರತ್ ಬ್ರಾಂಡ್ ಅಡಿಯಲ್ಲಿ ರೈತರಿಗೆ ಅಗ್ಗದ ಮತ್ತು ಉತ್ತಮ ಗುಣಮಟ್ಟದ ರಸಗೊಬ್ಬರಗಳನ್ನು ಒದಗಿಸುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಒಂದು ದೇಶ ಒಂದು ರಸಗೊಬ್ಬರದಿಂದ ರೈತರು ಉತ್ತಮ ಗೊಬ್ಬರವನ್ನು ಪಡೆಯುತ್ತಾರೆ.

ರಸಗೊಬ್ಬರಗಳ ಉತ್ಪಾದನಾ ತಂತ್ರಜ್ಞಾನ ಮತ್ತು ಗುಣಮಟ್ಟದಲ್ಲಿ ಪ್ರಮುಖ ಬದಲಾವಣೆಯಾಗಿದೆ. 'ಇದು ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಎಲ್ಲಾ ಬೆಳೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ. ಭಾರತವು ಶೀಘ್ರದಲ್ಲೇ ಜಾಗತಿಕವಾಗಿ ಕೃಷಿ ಉತ್ಪನ್ನಗಳ ಸಮರ್ಥ ಉತ್ಪಾದನೆಯ ಕೇಂದ್ರವಾಗಿ ಹೊರಹೊಮ್ಮಲಿದೆ' ಎಂದು ಮೋದಿ ಅವರು ಹೇಳಿದರು.