12 ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಹೊರಹಾಕಿದ ಬಿಜೆಪಿ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುತ್ತಿರುವ ಇನ್ನೂ 12 ನಾಯಕರನ್ನು ಗುಜರಾತ್ ಬಿಜೆಪಿ ಅಮಾನತುಗೊಳಿಸಿದೆ. ಡಿ.1 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಕ್ಕಾಗಿ 7 ಬಿಜೆಪಿ ನಾಯಕರನ್ನು ಅಮಾನತುಗೊಳಿಸಿದ ದಿನಗಳ ನಂತರ ಈ ಕ್ರಮ ಬಂದಿದೆ. 6 ಬಾರಿ ಶಾಸಕರಾಗಿದ್ದ ಮಧು ಶ್ರೀವಾಸ್ತವ & ಇಬ್ಬರು ಮಾಜಿ ಶಾಸಕರು ಸೇರಿದಂತೆ 12 ಪಕ್ಷದ ನಾಯಕರನ್ನು ಬಿಜೆಪಿ ಅಮಾನತು ಮಾಡಿದೆ.