ಕರ್ನಾಟಕದ ರಾಜ್ಯ ಪಕ್ಷಿ ಯಾವುದು? ಇದು ಎಲ್ಲೆಲ್ಲಿ ಕಂಡು ಬರುತ್ತದೆ? ಗೊತ್ತ

ಕರ್ನಾಟಕದ ರಾಜ್ಯ ಪಕ್ಷಿ ಯಾವುದು? ಇದು ಎಲ್ಲೆಲ್ಲಿ ಕಂಡು ಬರುತ್ತದೆ? ಗೊತ್ತ

ಬೆಂಗಳೂರು: ನಮ್ಮ ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ಪ್ರಾಣಿ, ಪಕ್ಷಿ, ಮರ, ಹೂವು ಸೇರಿದಂತೆ ತನ್ನದೇ ಆದ ಮುದ್ರೆ ಮತ್ತು ಲಾಂಛನ ಹೊಂದಿದೆ. ಅದೇ ರೀತಿ ಕೂಡ ಕರ್ನಾಟಕವು ಕೂಡ ಹೊಂದಿದೆ.

'ದಾಸ ಮಗರೆ' ಪಕ್ಷಿಯು ಕರ್ನಾಟಕದ ರಾಜ್ಯ ಪಕ್ಷಿಯಾಗಿದೆ.

ಇದನ್ನು ಆಂಗ್ಲ ಭಾಷೆಯಲ್ಲಿ 'ಇಂಡಿಯನ್ ರೋಲರ್' ಹಾಗು ಹಿಂದಿಯಲ್ಲಿ 'ನೀಲಕಂಠ' ಎಂದು ಅಂತ ಹೇಳುತ್ತಾರೆ.

ಈ ಪಕ್ಷಿಯು ಗಾತ್ರದಲ್ಲಿ ಹೆಚ್ಚು- ಕಮ್ಮಿ ಪಾರಿವಾಳವನ್ನು ಹೋಲುತ್ತದೆ, ನೀಲಿ ಬಣ್ಣವನ್ನು ಹೆಚ್ಚಾಗಿ ಹೊಂದಿದ್ದು, ನೀಲಿಯ ಜೊತೆಗೆ ನೇರಳೆ, ಬೂದು, ಕೆಂಪು, ಕಂದು, ಬಿಳಿ ಬಣ್ಣಗಳನ್ನೊಂದಿದೆ. ನೆತ್ತಿಯ ಬಣ್ಣ ನೀಲಿ, ಕೊಕ್ಕು ಕಂದು - ಕಪ್ಪು ಬಣ್ಣದ್ದು. ಕತ್ತಿನ ಕಪ್ಪು ಬಿಳಿ ಗಡ್ಡದಂತೆ ಕಾಣುತ್ತದೆ. ಎದೆಯ ಮೇಲ್ಭಾಗದಲ್ಲಿ ಕಂದು ಬಣ್ಣವಿದ್ದರೆ ಕೆಳಭಾಗದಲ್ಲಿ ನೀಲಿ ಬಣ್ಣವಿರುತ್ತದೆ.

ಭಾರತದಲ್ಲಿ ಅತಿ ಹೆಚ್ಚು ರಾಜ್ಯಗಳಿಗೆ ರಾಜ್ಯಪಕ್ಷಿಯಾದ ಕೀರ್ತಿ ಕೂಡಾ ನೀಲಕಂಠ ಪಕ್ಷಿಗೆ ಸಲ್ಲುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಹಾಗೂ ತೆಲಂಗಾಣ ರಾಜ್ಯಗಳಿಗೆ ರಾಜ್ಯ ಪಕ್ಷಿಯಾಗಿದೆ.