ದೇಶ ಕಟ್ಟುವುದು ಸಂಸತ್ತಿನಲ್ಲಿ ಅಲ್ಲ, ತರಗತಿ ಕೋಣೆಯಲ್ಲಿ

ಹುಬ್ಬಳ್ಳಿ: ಪ್ರತಿಯೊಬ್ಬ ವಿದ್ಯಾಥಿರ್ಯಲ್ಲೂ ಕಲಿಯುವ ಸಾಮರ್ಥ್ಯವಿದೆ. ಶಿಕ್ಷಕರು ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕು. ದೇಶ ಬದಲಾಗಬೇಕಾದರೆ ದೇಶದ ಬಗ್ಗೆ ಹೆಮ್ಮೆ ಇರಬೇಕು. ದೇಶ ಕಟ್ಟುವುದು ಸಂಸತ್ತಿನಲ್ಲಿ ಅಲ್ಲ, ತರಗತಿ ಕೋಣೆಯಲ್ಲಿ ಎಂದು ಉನ್ನತ ಶಿಕ್ಷಣ ಪರಿಷತ್ನ ನಿರ್ದೇಶಕ ಪ್ರೊ.ಶಿವಪ್ರಸಾದ ಹೇಳಿದರು.
ಯುವಕರನ್ನು ಸರಿಯಾದ ಮಾರ್ಗದಲ್ಲಿ ನಾವು ನಡೆಸದೇ ಹೋದರೆ ದೇಶದ ಅಭಿವದ್ಧಿ ಕುಂಠಿತವಾಗುತ್ತದೆ. ಹಾಗಾಗಿ, ಸಮಾಜ ಬದಲಾವಣೆಯಾಗಬೇಕಾದರೆ ಶಿಕರು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು. ಜ್ಞಾನ ಹಂಚುವ ಕಾರ್ಯ ಪವಿತ್ರವಾದುದು ಎಂದು ಶಿಕ್ಷಕರು ಭಾವಿಸಬೇಕು. ದೇಶದೊಳಗೆ ಬೆಳೆಸುವ ಸಂಸತಿ, ಜ್ಞಾನಕ್ಕೆ ಹೆಚ್ಚಿನ ಆದ್ಯತೆ ಶಾಲೆಗಳಲ್ಲೇ ಸಿಗಬೇಕು ಎಂದರು.
ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ವಿಜ್ಞಾನಿಗಳ ಸಂಖ್ಯೆ ಕಡಿಮೆಯಾಗಿದೆ. ಆದುದರಿಂದ ವಿದ್ಯಾಥಿರ್ಗಳನ್ನು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಕೊಡುಗೆಗಳನ್ನು ನೀಡಲು ಪ್ರೇರೇಪಿಸಬೇಕು. ಮಕ್ಕಳಿಗೆ ತಂತ್ರಜ್ಞಾನದ ಸದಾವಕಾಶಗಳನ್ನು ಬಳಸಿಕೊಂಡು ಹೇಗೆ ಕಲಿಕೆಯಲ್ಲಿ ಮುಂದುವರಿಯಬೇಕು ಎಂಬುದನ್ನು ಮನದಟ್ಟು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರವಿಣಕುಮಾರ.ಎಸ್ ಮಾತನಾಡಿ, ಶಿಕ್ಷಕರು ಕಲಿಯುವ ವಿಷಯದಲ್ಲಿ ಮಕ್ಕಳಂತೆ ವತಿರ್ಸಬೇಕು. ಕಲಿಕೆಯನ್ನು ಸಂತಸವೆಂದು ತಿಳಿಯಬೇಕು. ಪ್ರತಿ ಮಗುವಿನ ಬೆಳವಣಿಗೆಗೆ ಸರ್ವ ರೀತಿಯಲ್ಲೂ ಸಹಕಾರ ನೀಡಬೇಕು. ಪ್ರತಿ ಕಾರ್ಯಕ್ರಮ ರೂಪಿಸುವಾಗ ಮಗುವೇ ಅಂತಿಮ ಎಂದು ಭಾವಿಸಬೇಕು ಎಂದು ಕಿವಿಮಾತು ಹೇಳಿದರು.
ಸಮಾವೇಶದಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ, ಧಾರವಾಡ ಜೆಲ್ಲೆಗಳಿಂದ 211 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಸದಸ್ಯ ಡಾ.ಎಂ.ಎ.ಬಾಲಸುಬ್ರಮ್ಹಣ್ಯ, ಸಂಸ್ಥೆಯ ಪ್ರಾದೇಶಿಕ (ಉತ್ತರ ಕರ್ನಾಟಕ) ಮುಖ್ಯಸ್ಥ ಕೆ.ಎಸ್.ಜಯಂತ, ನಿವೃತ್ತ ಶಿಕ್ಷಕರಾದ ಸುರೇಶ ಕುಲಕಣಿ೯, ಎಚ್.ಎಲ್.ಸತೀಶ, ಮತ್ತಿತರರು ಉಪಸ್ಥಿತರಿದ್ದರು.