ಅಧಿಕಾರಿಗಳು ಕ್ರಮ ಕೈಗೊಳ್ಳಲು ಕಾಳಜಿ ವಹಿಸುತ್ತಾರಾ? ಜನರು ಅವರನ್ನು ಅವಮಾನಿಸುತ್ತಲೇ ಇರಬೇಕಾ?: ಕಿರಣ್ ಮಜುಂದಾರ್ ಶಾ
ಬಳಗೆರೆ–ಪಣತ್ತೂರು ರಸ್ತೆಯ ಮೂಲಕ ಸಾಗುವಾಗ ಪಣತ್ತೂರು ಕ್ರಾಸ್ನಲ್ಲಿ ಬುಧವಾರ ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿರುವುದನ್ನು ವಿದ್ಯಾರ್ಥಿಗಳೇ ವಿವರಿಸಿದ್ದಾರೆ. ಶಾಲೆಯಿಂದ ಮಕ್ಕಳು ಸರಿಯಾದ ಸಮಯಕ್ಕೆ ಮನೆಗೆ ಬರಲು ಸಾಧ್ಯವಾಗುತ್ತಿಲ್ಲ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪೋಷಕರು ದೂರಿದ್ದಾರೆ. ವಿಡಿಯೊ ಅನ್ನು ಮರು ಟ್ವೀಟ್ ಮಾಡಿರುವ ಕಿರಣ್ ಮಜುಂದಾರ್ ಶಾ, ’ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಯೇ?
ರಾಜಕಾರಣಿಗಳನ್ನು ಪ್ರತಿಯೊಂದಕ್ಕೂ ದೂರಲು ಸಾಧ್ಯವಿಲ್ಲ. ಕೆಳಹಂತದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಅಧಿಕಾರಿಗಳ ಜತೆಗೆ ಗುತ್ತಿಗೆದಾರರು ಸಹ ಉತ್ತರದಾಯಿತ್ವ ಹೊಂದಿದ್ದಾರೆ’ ಎಂದು ಹೇಳಿದ್ದಾರೆ. ಈ ಪ್ರದೇಶವು ಹೊರ ವರ್ತುಲ ರಸ್ತೆಯಿಂದ ಕೇವಲ 2 ಕಿ.ಮೀ.
ದೂರವಿದೆ, ಆದರೆ ಈ ಕಾಮಗಾರಿಗಳೆಲ್ಲವೂ ನನೆಗುದಿಗೆ ಬಿದ್ದಿವೆ. ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿ ಕಾಮಗಾರಿಗೆ ವೇಗ ನೀಡುವಂತೆ ಒತ್ತಾಯಿಸಿದ್ದಾರೆ. ನರೇಂದ್ರ ಮೋದಿಜಿ ನೀವು ನಮ್ಮ ಬೆಂಗಳೂರಿಗೆ ಬಂದಾಗ ನಮ್ಮನ್ನು ಭೇಟಿ ಮಾಡಿ ಎಂದರು. ನಮ್ಮ ಬೆಂಗಳೂರು ಪೇಜ್ ಟ್ವೀಟ್ ಮಾಡಿದೆ. "ಸಮಸ್ಯೆಯನ್ನುಸರಿ ಪಡಿಸಲು ನಾನು ಸಂಬಂಧಿಸಿದ ಸಂಸ್ಥೆ ಮತ್ತು ಅಧಿಕಾರಿಗಳ ಸಭೆ ನಡೆಸುತ್ತೇನೆ." ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ ಎಂದು ಸಂಗಪ್ಪ ದೇಸಾಯಿ ತಿಳಿಸಿದ್ದಾರೆ.