ಟಾಲಿವುಡ್ ಹಾಟ್ ಬ್ಯೂಟಿ ಪಾಯಲ್ ರಜಪೂತ್ ಎಡವಟ್ಟು: ಕೋರ್ಟ್ ಆದೇಶದ ಮೇರೆಗೆ ದಾಖಲಾಯ್ತು ದೂರು!

ಹೈದರಾಬಾದ್: ಟಾಲಿವುಡ್ ಹಾಟ್ ಬ್ಯೂಟಿ ಪಾಯಲ್ ರಜಪೂತ್ ಸಣ್ಣ ಎಡವಟ್ಟು ಮಾಡಿಕೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಸಲಿಗೆ ಪಾಯಲ್ ರಜಪೂತ್ ಮಾಡಿಕೊಂಡ ಎಟವಟ್ಟು ಏನೆಂದರೆ, ಪೆದ್ದಪಲ್ಲಿಯ ಅಂಗಡಿಯೊಂದರ ಉದ್ಘಾಟನೆಯಲ್ಲಿ ಅವರು ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಸಂತೋಷ್ ಎಂಬುವರು ಕೋರ್ಟ್ ಮೆಟ್ಟಿಲೇರಿದ್ದು, ನಟಿ ಪಾಯಲ್ ಅವರು ಉದ್ಘಟನಾ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ಕರೊನಾ ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಕೋರ್ಟ್ ಆದೇಶದ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಯಲ್ ಮಾತ್ರವಲ್ಲದೆ, ಶಾಪ್ ಮಾಲೀಕ ಸೇರಿದಂತೆ ಅನೇಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಪಾಯಲ್ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಆರ್ಎಕ್ಷ್ 100 ಮತ್ತು ಆರ್ಡಿಎಕ್ಸ್ ಲವ್ ಚಿತ್ರಗಳಲ್ಲಿನ ಬೋಲ್ಡ್ ನಟನೆಯ ಮೂಲಕ ಪಾಯಲ್ ಸಖತ್ ಸುದ್ದಿ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿರುವ ಪಾಯಲ್, ಡಾಲಿ ಧನಂಜಯ ನಟನೆಯ 'ಹೆಡ್ ಬುಷ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. (ಏಜೆನ್ಸೀಸ್)