ತಾಲಿಬಾನ್​ ಉಗ್ರರ ಅಟ್ಟಹಾಸದ ನಡುವೆಯೇ ಪ್ರತಿಜ್ಞೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​

ತಾಲಿಬಾನ್​ ಉಗ್ರರ ಅಟ್ಟಹಾಸದ ನಡುವೆಯೇ ಪ್ರತಿಜ್ಞೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​

ವಾಷಿಂಗ್ಟನ್: ಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸದ ನಡುವೆ ಸಿಲುಕಿರುವ ಎಲ್ಲ ಅಮೆರಿಕನ್ನರು ಮತ್ತು ಯುಎಸ್​ ಸೇನೆಗೆ ನೆರವು ನೀಡಿದ ಆಫ್ಘಾನ್ ಸಹಾಯಕರನ್ನು ಸ್ಥಳಾಂತರ ಮಾಡುವುದಾಗಿ ಅಧ್ಯಕ್ಷ ಜೋ ಬೈಡೆನ್​ ಅವರು ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ.

169 ಅಮೆರಿಕನ್ನರನ್ನು ಸ್ಥಳಾಂತರಿಸಲು ಕೋರಿಕೊಂಡು ಯುಎಸ್ ಮಿಲಿಟರಿ ಹೆಲಿಕಾಪ್ಟರ್​ಗಳು ಕಾಬೂಲ್ ವಿಮಾನ ನಿಲ್ದಾಣದ ಆಚೆಗೆ ಹಾರಿರುವುದನ್ನು ಅಧಿಕಾರಿಗಳು ಧೃಡೀಕರಿಸಿದ್ದಾರೆ.

ಕಾಬುಲ್​ ಏರ್​ಪೋರ್ಟ್​ನಲ್ಲಿ ಪರಿಸ್ಥಿತಿ ಬಿಗಾಡಿಯಿಸಿದ್ದರೂ ಅಲ್ಲಿನ ಜನರಿಗೆ ಬೈಡೆನ್​ ಭರವಸೆ ನೀಡಿದ್ದಾರೆ. ಇನ್ನು ತಾಲಿಬಾನಿ ಉಗ್ರರು ಕಾಬೂಲ್​ ಏರ್​ಪೋರ್ಟ್​ ಮಾರ್ಗದಲ್ಲಿ ಅನೇಕ ಕಡೆ ಚೆಕ್​ಪೋಸ್ಟ್​ಗಳನ್ನು ನಿರ್ಮಾಣ ಮಾಡಿ, ರಸ್ತೆಗಳನ್ನು ಬ್ಲಾಕ್​ ಮಾಡಿದ್ದು, ಜನರು ಏರ್​ಪೋರ್ಟ್​ಗೆ ಹೋಗುವುದನ್ನು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸಾವಿರಾರು ಜನರನ್ನು ಇನ್ನು ಸ್ಥಳಾಂತರ ಮಾಡಬೇಕಿದೆ. ಈಗಾಗಲೇ 18 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದ್ದು, ಉಳಿದ ಸ್ಥಳಾಂತರ ಕಾರ್ಯ ನೆರವೇರಲಿದೆ. ಈ ಬಗ್ಗೆ ಮಾತನಾಡಿರುವ ಬೈಡೆನ್​, ಕಾಬುಲ್​ನಲ್ಲಿ ನಮ್ಮ 6 ಸಾವಿರ ಸೈನಿಕರು ಪ್ರಾಣ ಪಣಕ್ಕಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾಬುಲ್​ ಸ್ಥಳಾಂತರ ಇತಿಹಾಸದಲ್ಲೇ ಅತ್ಯಂತ ಅಪಾಯಕಾರಿ ಸ್ಥಳಾಂತರಗಳಲ್ಲಿ ಒಂದು ಎಂದಿದ್ದಾರೆ.

ಸಾಧ್ಯವಾದಷ್ಟು ಎಲ್ಲರನ್ನೂ ಸ್ಥಳಾಂತರ ಮಾಡುತ್ತೇವೆ ಎಂದಿರುವ ಬೈಡೆನ್​, ರಕ್ಷಣಾ ಕಾರ್ಯಾಚರಣೆಯಲ್ಲಿ ಏನಾದರೂ ನಮ್ಮ ಯೋಧರಿಗೆ ತೊಂದರೆ ನೀಡಿದರೆ, ಪರಿಸ್ಥಿತಿ ಬೇರೆಯದ್ದೇ ಆಗಿರುತ್ತದೆ ಎಂದು ತಾಲಿಬಾನಿ ಉಗ್ರರಿಗೆ ಬೈಡೆನ್​ ಖಡಕ್​ ಎಚ್ಚರಿಕೆಯನ್ನು ನೀಡಿದ್ದಾರೆ. (ಏಜೆನ್ಸೀಸ್​)