ಮಂಗಳೂರು: ಹಾಡಹಗಲೇ ಜ್ಯುವೆಲ್ಲರ್ಸ್ ಶಾಪ್ ಗೆ ನುಗ್ಗಿ ವ್ಯಕ್ತಿ ಕೊಲೆ
ಮಂಗಳೂರು: ಹಾಡಹಗಲೇ ಜ್ಯುವೆಲ್ಲರ್ಸ್ ಶಾಪ್ ಗೆ ನುಗ್ಗಿ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಮಂಗಳೂರು ನಗರದ ಹಂಪನಕಟ್ಟೆಯಲ್ಲಿ ಸಂಜೆ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿರುವವನ್ನು ಮಂಗಳೂರು ಜ್ಯುವೆಲ್ಲರ್ಸ್ ನಲ್ಲಿ ಕೆಲಸಕ್ಕಿದ್ದ ಅತ್ತಾವರ ಮೂಲದ ರಾಘವ ಆಚಾರಿ ಅಂತ ತಿಳಿದು ಬಂದಿದೆ.
ಘಟನೆ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿದ ಪೋಲಿಸರು ಘಟನೆಗೆ ಸಂಬಂಧಪಟ್ಟಂತೆ ಕೊಲೆ ಕೃತ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು ಅಂಥ ತಿಳಿಸಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.