ಇಂದು 'ಮೌನಿ' ಅಮಾವಾಸ್ಯೆ ; ಹೀಗೆ ಮಾಡಿ, ಪೂರ್ವಜರು ಸಂತೃಪ್ತರಾಗ್ತಾರೆ, ನಿಮ್ಗೂ ಬಯಸಿದ್ದು ಸಿಗುತ್ತೆ

ಕೆಎನ್‌ಎನ್ಡಿಜಿಟಲ್ ಡೆಸ್ಕ್ : ಇಂದು ಶನಿವಾರ (ಜನವರಿ 21) ಮೌನಿ ಅಮವಾಸ್ಯೆ. ಮಾಘಮಾಸ ಅಮಾವಾಸ್ಯೆಯನ್ನ ಮೌನಿ ಅಮಾವಾಸ್ಯೆ ಎನ್ನುತ್ತಾರೆ. ಈ ದಿನದ ಗಂಗಾ ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ಮೌನಿ ಅಮಾವಾಸ್ಯೆಯ ದಿನ ವಿಷ್ಣುವನ್ನ ಪೂಜಿಸುವ ಪದ್ಧತಿ ಇದ್ದು, ಗಂಗಾಸ್ನಾನದ ಜೊತೆಗೆ ನಾರಾಯಣನನ್ನು ಪೂಜಿಸುವವನು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ.
ಗಂಗೆ ಮಾತ್ರವಲ್ಲದೇ ಯಾವುದೇ ಪುಣ್ಯ ನದಿಯಲ್ಲಿ ಸ್ನಾನ ಮಾಡಿದ್ರೆ, ಪುಣ್ಯ ಸಿಗುತ್ತದೆ ಎಂದು ಹೇಳಲಾಗುತ್ತದೆ. ಮೌನಿ ಅಮಾವಾಸ್ಯೆ ದಿನದಂದು ಉಪವಾಸ ಮಾಡುವುದರಿಂದ ಪೂರ್ವಜರಿಗೆ ಮೋಕ್ಷ ಮತ್ತು ಪುಣ್ಯ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಮೌನಿ ಅಮವಾಸ್ಯೆಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಮನೆಯಲ್ಲಿ ಸ್ನಾನದ ನೀರಿಗೆ ಗಂಗಾಜಲ ಸೇರಿಸಿ ಸ್ನಾನ ಮಾಡಿ ಎನ್ನುತ್ತಾರೆ.
ಅಲ್ಲದೇ, ಪಿತೃ ತರ್ಪಣವನ್ನ ಮಾಡಲು ಇದು ಅತ್ಯುತ್ತಮ ದಿನ ಎಂದು ಹೇಳಲಾಗುತ್ತದೆ. ನದಿಯಲ್ಲಿ ಸ್ನಾನ ಮಾಡಿದ ನಂತರ ಅಥವಾ ಮನೆಯಲ್ಲಿ ಸೂರ್ಯನಿಗೆ ಅರ್ಘ್ಯವನ್ನ ಅರ್ಪಿಸಿದ್ಮೇಲೆ ಪಿತ್ರಾ ತರ್ಪಣವನ್ನ ಮಾಡಬೇಕು. ಇದಾದ ನಂತ್ರ ಬಡವರಿಗೆ ಅಥವಾ ಬ್ರಾಹ್ಮಣರಿಗೆ ಅನ್ನವನ್ನ ಅರ್ಪಿಸಬೇಕು. ಗರುಡ ಪುರಾಣದಲ್ಲಿ ಅಮಾವಾಸ್ಯೆಯಂದು ಪೂರ್ವಜರು ತಮ್ಮ ಸಂತತಿಯನ್ನ ನಂಬುತ್ತಾರೆ. ಅಂದು ಉಪವಾಸವಿದ್ದು, ಪುಣ್ಯನದಿಯಲ್ಲಿ ಸ್ನಾನ ಮಾಡಿ, ಪೂರ್ವಜರ ಹೆಸರಿನಲ್ಲಿ ದಾನ, ಅನ್ನಸಂತರ್ಪಣೆ ಮಾಡುವುದರಿಂದ ಅವರಿಗೆ ಸಂತೃಪ್ತಿ ಲಭಿಸುತ್ತದೆ ಮತ್ತು ಅವರ ಆಶೀರ್ವಾದ ಲಭಿಸುತ್ತದೆ ಎಂದು