ಮತ್ತೆ ಭದ್ರತಾ ಲೋಪ.! 'AIIMS' ಆಯ್ತು, ಈಗ 'ಜಲ ಶಕ್ತಿ ಸಚಿವಾಲಯ'ದ ಟ್ವಿಟರ್ ಖಾತೆ ಹ್ಯಾಕ್

ಮತ್ತೆ ಭದ್ರತಾ ಲೋಪ.! 'AIIMS' ಆಯ್ತು, ಈಗ 'ಜಲ ಶಕ್ತಿ ಸಚಿವಾಲಯ'ದ ಟ್ವಿಟರ್ ಖಾತೆ ಹ್ಯಾಕ್

ವದೆಹಲಿ : ದಿನದಿಂದ ದಿನಕ್ಕೆ ಹ್ಯಾಕಿಂಗ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಕೆಲವು ದಿನಗಳ ಹಿಂದೆ ದೆಹಲಿಯ ಸರ್ಕಾರಿ ಆಸ್ಪತ್ರೆ ಏಮ್ಸ್ನ ಸರ್ವರ್ ಹ್ಯಾಕ್ ಆಗಿತ್ತು. ಇದೀಗ ಮತ್ತೊಮ್ಮೆ ಹ್ಯಾಕರ್ಗಳು ಸರ್ಕಾರದ ಭದ್ರತೆಗೆ ದಕ್ಕೆ ತಂದಿದ್ದಾರೆ.

ಕೇಂದ್ರ ಸರ್ಕಾರದ ಸಚಿವಾಲಯವನ್ನ ಹ್ಯಾಕ್ ಮಾಡಲಾಗಿದ್ದು, ಗುರುವಾರ ಬೆಳಿಗ್ಗೆ ಹ್ಯಾಕರ್ಗಳು ಈ ದಾಳಿ ನಡೆಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, 9 ದಿನಗಳಲ್ಲಿ ಇದು ಎರಡನೇ ದೊಡ್ಡ ಸೈಬರ್ ದಾಳಿಯಾಗಿದೆ.ದೆಹಲಿಯ ಏಮ್ಸ್ ಆಸ್ಪತ್ರೆಯ ಸರ್ವರ್'ನ್ನ ಗುರಿಯಾಗಿಸಿಕೊಂಡು ಹ್ಯಾಕರ್ಗಳು ಈ ಬಾರಿ ಜಲಶಕ್ತಿ ಸಚಿವಾಲಯದ ಟ್ವಿಟರ್ ಖಾತೆಯನ್ನ ಹ್ಯಾಕ್ ಮಾಡಿದ್ದಾರೆ. ಕ್ರಿಪ್ಟೋ ಸೂಜಿ ವ್ಯಾಲೆಟ್'ನ್ನ ಪ್ರಚಾರ ಮಾಡಲು ಬೆಳಿಗ್ಗೆ 5:38 ಕ್ಕೆ ಟ್ವೀಟ್ ಮಾಡಲಾಗಿದೆ. ಅಷ್ಟೇ ಅಲ್ಲ, ಹ್ಯಾಕರ್ಗಳು ಜಲ ಶಕ್ತಿ ಸಚಿವಾಲಯದ ಟ್ವೀಟರ್ ಖಾತೆ ಹ್ಯಾಕ್ ಮಾಡಿದ್ದು, ಲೋಗೋ ಮತ್ತು ಖಾತೆಯ ಪ್ರೊಫೈಲ್ ಫೋಟೋವನ್ನ ಸಹ ಬದಲಾಯಿಸಿದ್ದಾರೆ.ಕೇಂದ್ರ ಜಲ ಶಕ್ತಿ ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ ನಂತ್ರ ಹ್ಯಾಕರ್ಗಳು ಸರಣಿ ಟ್ವೀಟ್ಗಳಲ್ಲಿ ಸ್ವಚ್ಛ ಭಾರತ ಮತ್ತು ಇತರ ಸಚಿವಾಲಯಗಳನ್ನ ಟ್ಯಾಗ್ ಮಾಡಿದ್ದಾರೆ. ಜನರ ಮಾಹಿತಿಗಾಗಿ, ಜಲಶಕ್ತಿ ಸಚಿವಾಲಯದ ಟ್ವಿಟರ್ ಖಾತೆಯಿಂದ ಮಾಡಿದ ಎಲ್ಲಾ ಟ್ವೀಟ್ಗಳನ್ನು ಅಳಿಸಲಾಗಿದೆ.ಕೆಲವು ಬೋಟ್ ಖಾತೆಗಳು ಮತ್ತು ಕೆಲವು ನೈಜ ಖಾತೆಗಳನ್ನ ಟ್ವೀಟ್ನೊಂದಿಗೆ ಟ್ಯಾಗ್ ಮಾಡಲಾಗಿದೆ. ಇನ್ನು ನಿಮ್ಗೆ ಅಚ್ಚರಿ ಆಗ್ಬೋದು ಹ್ಯಾಕ್ ಮಾಡಿದ ನಂತ್ರ ಹ್ಯಾಕರ್ಗಳು 80ಕ್ಕೂ ಹೆಚ್ಚು ಟ್ವೀಟ್ಗಳನ್ನ ಮಾಡಿದ್ದಾರೆ.