ಆನ್‌ಲೈನ್ ಜೂಜಿಗೆ ಬಿದ್ದು ಸಾಲ ತೀರಿಸಲಾಗದೇ ಯುವಕ ಆತ್ಮಹತ್ಯೆ

ಆನ್‌ಲೈನ್ ಜೂಜಿಗೆ ಬಿದ್ದು ಸಾಲ ತೀರಿಸಲಾಗದೇ ಯುವಕ ಆತ್ಮಹತ್ಯೆ

ತುಮಕೂರು: ಆನ್‌ಲೈನ್ ಜೂಜಿಗೆ ಬಿದ್ದು ಸಾಲ ತೀರಿಸಲಾಗದೇ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ಮಾದಪಟ್ಟಣದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡು ಯುವಕನನ್ನು ಮಂಜುನಾಥ್(34) ಅಂತ ತಿಳಿದು ಬಂದಿದೆ.

ಮಂಜುನಾಥ್ ರಮ್ಮಿ ಆಟದ ಜೂಜಿಗೆ ಬಿದ್ದು ಆಟವಾಡಲು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ನಡುವೆ ಸಾಲಗಾರರು ಹಣಕ್ಕಾಗಿ ಪೀಡಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಸಾಲಗಾರರ ಕಿರುಕುಳಿಂದ ಬೇಸತ್ತು ಮಂಜುನಾಥ್‌ ಶನಿವಾರ ತನ್ನ ಮಾವನ ಮನೆಯಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನೂ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಎನ್ನಲಾಗಿದ್ದು, ಸದ್ಯ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.