ಹಣಕ್ಕಾಗಿ ಸ್ವಂತ ಸಂಬಂಧಿಕರಿಂದಲೇ ಬಾಲಕಿಯ ಅಪಹರಣ!? ಮಗಳಿಗಾಗಿ ಪಾಲಕರ ಕಣ್ಣೀರು

ಹೈದರಾಬಾದ್: ಹಣಕ್ಕಾಗಿ ಮನುಷ್ಯ ಯಾವ ಮಟ್ಟಕ್ಕಾದರೂ ಇಳಿಯುತ್ತಾನೆ ಎಂಬುದಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ. ಅಲ್ಲದೆ, ಹಣದ ಮುಂದೆ ಸಂಬಂಧಗಳೆಲ್ಲ ಗೌಣ ಎಂಬುದನ್ನು ಈ ಘಟನೆ ನಿರೂಪಿಸಿದೆ.
ಹಣಕ್ಕಾಗಿ ಸಂಬಂಧಿಕರ ಮಗಳನ್ನೇ ಅಪಹರಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಪಾಲಕರ ದೂರಿನ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಹತ್ತಿರದ ಸಂಬಂಧಿಕರು ತಮ್ಮ ಮಗಳನ್ನು ಅಪಹರಿಸಿದ್ದಾರೆ ಎಂದು ಪಾಲಕರು ಆರೋಪಿಸಿದ್ದು, ಆ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಹಣಕ್ಕಾಗಿ ಪತ್ನಿಯ ಸಂಬಂಧಿಕರು ಮಗಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದ ಸಂಬಂಧಿಕರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ ಬಾಲಕಿ ಎಲ್ಲಿದ್ದಾಳೆಂದು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಹೇಗಾದರೂ ಮಗಳನ್ನು ಪತ್ತೆ ಮಾಡಿ ಒಪ್ಪಿಸುವಂತೆ ಪೋಷಕರು ಮನವಿ ಮಾಡಿದ್ದು, ತಾವು ಆತಂಕದಲ್ಲಿರುವುದಾಗಿ ಹೇಳಿದ್ದಾರೆ. ಆದರೆ, ಸ್ವಂತ ಸಂಬಂಧಿಕರೇ ಹಣಕ್ಕಾಗಿ ಕಿಡ್ನಾಪ್ ಮಾಡಿದ್ದಾರೆ ಎಂಬ ತಂದೆಯ ಆರೋಪ ಇದೀಗ ಭಾರೀ ಸಂಚಲನ ಮೂಡಿಸಿದೆ.
ಹೈದರಾಬಾದ್‌ನಲ್ಲಿ ಇತ್ತೀಚೆಗೆ ಹಲವೆಡೆ ಮಕ್ಕಳ ಅಪಹರಣ ನಡೆಯುತ್ತಿದೆ. ಹಣಕ್ಕಾಗಿ ಮಕ್ಕಳನ್ನು ಅಪಹರಿಸುವ ಘಟನೆಗಳು ನಡೆಯುತ್ತಿವೆ. ಆದರೆ ಈ ಪ್ರಕರಣದಲ್ಲಿ ಸ್ವಂತ ಸಂಬಂಧಿಕರೇ ಮಗಳನ್ನು ಅಪಹರಿಸಲು ಕಾರಣವೇನು? ತಂದೆಯ ಆರೋಪ ನಿಜವೇ? ಇದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. (ಏಜೆನ್ಸೀಸ್)