ಚಂಡೀಗಢ ಕೇಸ್‌ನಲ್ಲಿ ಪ್ರತಿಧ್ವನಿಸಿದ ಬೆಂಗಳೂರಿನ ಅವ್ಯವಸ್ಥಿತ ನಗರೀಕರಣ ಯೋಜನೆ
ಬೆಂಗಳೂರಿನ ಅವ್ಯವಸ್ಥಿತ ನಗರೀಕರಣ ವಿಚಾರ ಸುಪ್ರೀಂಕೋರ್ಟ್‍ನಲ್ಲಿ ಪ್ರತಿಧ್ವನಿಸಿದೆ. ಚಂಡೀಘಡದಲ್ಲಿ ಅಪಾರ್ಟ್‍ಮೆಂಟ್‍ಗಳ ವಿಂಗಡಣೆ ಮತ್ತು ಉಪವಿಂಗಡಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಬಿವಿ ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ, ಒಂದು ಕಾಲದಲ್ಲಿ ದೇಶದ ಅತ್ಯುತ್ತಮ ನಗರಗಳಲ್ಲಿ ಒಂದೆಂದು ಪರಿಗಣಿತವಾಗಿದ್ದ ಬೆಂಗಳೂರು ಈಗ ಹೇಗೆ ಹಾಳಾಗಿದೆ ನೋಡಿ. ಬೆಂಗಳೂರಿನ ಅವ್ಯವಸ್ಥಿತ ನಗರೀಕರಣ ಒಂದು ಎಚ್ಚರಿಕೆಯ ಕರೆಗಂಟೆ ಈ ಬಗ್ಗೆ ಶಾಸಕಾಂಗ, ಕಾರ್ಯಾಂಗ ಗಮನ ಹರಿಸಬೇಕು ಎಂದು ಪೀಠ