ಕ್ರಿಸ್‌ಗೇಲ್ ಬೀಳ್ಕೊಡುಗೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಯೋಜನೆ: ಜನವರಿಯಲ್ಲಿ ಕೊನೆಯ ಪಂದ್ಯ

ಕ್ರಿಕೆಟ್ ಲೋಕದ ದಿಗ್ಗಜ ಬ್ಯಾಟ್ಸ್‌ಮನ್ ಕ್ರಿಸ್‌ಗೇಲ್‌ಗೆ ಬೀಳ್ಕೊಡುಗೆ ನೀಡಲು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ತಯಾರಿ ನಡೆಸುತ್ತಿದೆ. ಐರ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣಿ ನಡೆಯುವುದು ಖಚಿತಗೊಂಡ್ರೆ, ಮುಂದಿನ ವರ್ಷ ಜನವರಿಯಲ್ಲಿ ಕ್ರಿಸ್‌ಗೇಲ್ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನಾಡಲಿದ್ದಾರೆ.
2021ರ ಟಿ 20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಪರ ಕಾಣಿಸಿಕೊಂಡಿರುವ ಗೇಲ್, ಜಮೈಕಾದಲ್ಲಿ ತಮ್ಮ ತವರು ಅಭಿಮಾನಿಗಳ ಮುಂದೆ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಕಳೆದ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಲೀಗ್ ಹಂತದಲ್ಲೇ ಹೊರಬಿದ್ದಿತ್ತು.
ಕ್ರಿಸ್‌ಗೇಲ್ ಕಳೆದ ಎರಡು ದಶಕಗಳಲ್ಲಿ ಕ್ರಿಕೆಟ್‌ನಲ್ಲಿ ಅಗ್ರ ಪ್ರದರ್ಶನಕಾರರಲ್ಲಿ ಒಬ್ಬರಾಗಿದ್ದಾರೆ. ವಿಶೇಷವಾಗಿ T20 ಕ್ರಿಕೆಟ್‌ನಲ್ಲಿ ಆತನನ್ನ ಮೀರಿಸುವ ಮತ್ತೊಬ್ಬ ಆಟಗಾರನಿಲ್ಲ. ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ ಬೆರಳೆಣಿಕೆಯ ಆಟಗಾರರಲ್ಲಿ ಅವರು ಕೂಡ ಒಬ್ಬರು.
ಕ್ರಿಸ್‌ಗೇಲ್ ವಿದಾಯದ ಪಂದ್ಯ ಬಯಸುತ್ತಿದ್ದಾರೆ ಎಂಬ ಕಾರಣಕ್ಕಾಗಿ, ತಂಡದಲ್ಲಿ ಸ್ಥಾನಕ್ಕೆ ಅರ್ಹರಾಗಿರುವ ಇತರ ಕೆಲವು ಆಟಗಾರರನ್ನು ಬಿಟ್ಟುಬಿಡಬಾರದು ಎಂದು ಕ್ರಿಕೆಟ್ ನಿರೂಪಕ ಫಜೀರ್ ಮೊಹಮ್ಮದ್ ಅಭಿಪ್ರಾಯ ಪಟ್ಟಿದ್ದಾರೆ.
ಕ್ರಿಸ್‌ಗೇಲ್‌ರದ್ದು ಅದ್ಭುತ ಕ್ರಿಕೆಟ್ ಕೆರಿಯರ್: CWI ಸಿಇಒ ಜಾನಿ ಗ್ರೇವ್ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಸಿಇಒ ಜಾನಿ ಗ್ರೇವ್ ಅವರು ಸಬೀನಾ ಪಾರ್ಕ್‌ನೊಳಗೆ ಅಭಿಮಾನಿಗಳಿಗೆ ಅವಕಾಶ ನೀಡಿದರೆ, ವೆಸ್ಟ್ ಇಂಡೀಸ್‌ನ ಜನರಿಗೆ ಗೇಲ್‌ಗೆ ವಿದಾಯ ನೀಡಲು ಅವಕಾಶ ನೀಡಿದಂತಾಗುತ್ತದೆ ಎಂದು ಭಾವಿಸಿದ್ದಾರೆ. ಇದಕ್ಕಾಗಿ ಸಿಡಬ್ಲ್ಯೂಐ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿರುವ ಗ್ರೇವ್, ಕೆಲವೇ ದಿನಗಳಲ್ಲಿ ಸರಣಿಯನ್ನು ಖಚಿತಪಡಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರದೊಂದಿಗೆ CWI ಮಾತುಕತೆ
ಅಭಿಮಾನಿಗಳನ್ನು ಸಬೀನಾಗೆ ಅನುಮತಿಸಿದರೆ, ಕ್ರಿಸ್‌ಗೆ ಅವರ ತವರು ಮೈದಾನದಲ್ಲಿ ವಿದಾಯ ಹೇಳಲು ನಮಗೆ ಉತ್ತಮ ಅವಕಾಶ ಸಿಗಲಿದೆ. ಪ್ರೋಟೋಕಾಲ್‌ಗಳು ಮತ್ತು ಅಲ್ಲಿ ಸರಣಿಯನ್ನು ಆಡುವ ಸಾಮರ್ಥ್ಯದ ಬಗ್ಗೆ ನಾವು ಇನ್ನೂ ಜಮೈಕಾದ ಸರ್ಕಾರದೊಂದಿಗೆ ಮಾತನಾಡುತ್ತಿದ್ದೇವೆ. ಆದರೆ ಮುಂದಿನ ಕೆಲವು ದಿನಗಳಲ್ಲಿ ನಾವು ಜಮೈಕಾದಲ್ಲಿ ನಡೆಯಲಿರುವ ಒಂದು , ಎರಡು ಸರಣಿಯನ್ನು ಖಚಿತಪಡಿಸಬಹುದು ಎಂದು ನಾನು ಭಾವಿಸುತ್ತೇನೆ "ಗ್ರೇವ್ ಹೇಳಿದರು.
ಕ್ರಿಸ್‌ಗೇಲ್‌ನದ್ದು ಯಾರೂ ನಂಬಲಾಗದ ಕ್ರಿಕೆಟ್ ಕೆರಿಯರ್ಕ್ರಿಸ್‌ಗೇಲ್ ನಂಬಲಾಗದ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಹೊಂದಿರುವ ಆಟಗಾರ ಮತ್ತು ವೆಸ್ಟ್ ಇಂಡೀಸ್‌ಗಾಗಿ ಟ್ರೋಫಿಗಳನ್ನು ಗೆದ್ದಿದ್ದಾರೆ. ಹೀಗಾಗಿ ಅವರು ಬೀಳ್ಕೊಡುಗೆ ಪಂದ್ಯವನ್ನಾಡಲು ಅರ್ಹರಾಗಿದ್ದಾರೆ ಎಂದು ಗ್ರೇವ್ ಹೇಳಿದರು.
ಕ್ರಿಸ್‌ಗೇಲ್ ಬೀಳ್ಕೊಡುಗೆ ಪಂದ್ಯಕ್ಕೆ ಜೇಸನ್ ಹೋಲ್ಡರ್ ಬೆಂಬಲಇದಕ್ಕೂ ಮೊದಲ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಜೇಸನ್ ಹೋಲ್ಡರ್ ಕೂಡ ಕ್ರಿಸ್‌ಗೇಲ್‌ಗೆ ಬೀಳ್ಕೊಡುಗೆ ಪಂದ್ಯ ನೀಡಬೇಕು ಎಂದು ಆಗ್ರಹಿಸಿದ್ದರು. ಜೊತೆ ಮಾತನಾಡಿದ್ದ ಹೋಲ್ಡರ್, ಅವರು ತಂಡದ ಭಾಗವಾಗಿರದಿದ್ದರೂ ಗೇಲ್ ಅವರ ಬೀಳ್ಕೊಡುಗೆಯನ್ನು ವೀಕ್ಷಿಸಲು ಜಮೈಕಾಗೆ ಹಾರುತ್ತೇನೆ ಎಂದು ಹೇಳಿದ್ದರು.
ಗೇಲ್ ಅವರನ್ನು 'ಸಂಪೂರ್ಣ ದಂತಕಥೆ' ಎಂದು ಕರೆದಿರುವ ಹೋಡರ್ , ಕೆರಿಬಿಯನ್ ದ್ವೀಪಗಳು ಇದುವರೆಗೆ ನೀಡಿರುವ 'ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್' ಎಂದು ವಾದಿಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಸೀಮ್ ಬೌಲಿಂಗ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಸೆಲ್ಯುಟ್ ಹೊಡೆದಿದ್ದಾರೆ.
ಕ್ರಿಸ್ ಗೇಲ್ 1999 ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ನಂತರ ಟಿ20 ಕ್ರಿಕೆಟ್‌ನಲ್ಲಿ ಅಷ್ಟೇ ಅಲ್ಲದೆ ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಅತ್ಯಂತ ಭಯಾನಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. 10000 ಕ್ಕೂ ಹೆಚ್ಚು ODI ರನ್‌ಗಳನ್ನು ಮತ್ತು ದ್ವಿಶತಕವನ್ನು ಗಳಿಸುವುದರ ಜೊತೆಗೆ, ಅವರು ಎರಡು ಟೆಸ್ಟ್ ತ್ರಿಶತಕಗಳನ್ನು ಹೊಂದಿದ್ದಾರೆ ಮತ್ತು ಹಲವಾರು ಟಿ20 ಶತಕಗಳು ಅವರ ಹೆಸರಿನಲ್ಲಿದೆ