ಶರಣರನ್ನು ಪೀಠಾಧ್ಯಕ್ಷದಿಂದ ವಜಾಗೊಳಿಸಿ : ಬಿಎಸ್​ವೈ, ಬೊಮ್ಮಾಯಿ ಅಂಗಳಕ್ಕೆ ಗಾಣ

ಶರಣರನ್ನು ಪೀಠಾಧ್ಯಕ್ಷದಿಂದ ವಜಾಗೊಳಿಸಿ : ಬಿಎಸ್​ವೈ, ಬೊಮ್ಮಾಯಿ ಅಂಗಳಕ್ಕೆ ಗಾಣ

ಬೆಂಗಳೂರು : ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಮಠದ ಪೀಠಕ್ಕೆ ಬೇರೆ ಅಧ್ಯಕ್ಷರನ್ನು ನೇಮಿಸಿ ಎಂಬ ಒತ್ತಡ ಹೆಚ್ಚಾಗುತ್ತಿದೆ.

ವೀರಶೈವ ಲಿಂಗಾಯತ ಸಮಾಜದ ಮಠಗಳಲ್ಲೊಂದಾದ ಚಿತ್ರದುರ್ಗದ ಮುರುಘಾ ಮಠಕ್ಕೆ ತನ್ನದೆಯಾದ ಪರಂಪರೆ, ಇತಿಹಾಸ ಇದೆ.

ಹಲವು ವರ್ಷಗಳಿಂದ ಮಠ ಸಂಸ್ಕೃತಿ ಉಳಿಸಿ, ಬೆಳಸಿಕೊಂಡು ಹೆಸರು ಮಾಡಿದೆ. ಆದ್ರೆ, ಇದೀಗ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣ ಮೇಲೆ ಬಂದಿರುವ ಆರೋಪ ಮಠಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪೀಠಾಧ್ಯಕ್ಷ ಸ್ಥಾನದಿಂದ ಶಿವಮೂರ್ತಿ ಶರಣರನ್ನು ವಜಾಗೊಳಿಸಬೇಕೆಂಬ ಕೂಗು ಜೋರಾಗುತ್ತಿದೆ.

ಪೋಕ್ಸೋ ಕೇಸ್​​ನಲ್ಲಿ ಜೈಲುಪಾಲಾಗಿರುವ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೇ ಇದೀಗ ಮಠದ ಮಹಿಳಾ ಸಿಬ್ಬಂದಿಗೂ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮತ್ತೊಂದು ದೂರು ದಾಖಲಾಗಿದೆ. ಇದರ ಜೊತೆಗೆ ಇದೀಗ ಪೀಠಾಧ್ಯಕ್ಷ ಸ್ಥಾನದಿಂದ ಮುರುಘಾಶ್ರೀ ವಜಾಗೊಳಿಸುವಂತೆ ಕೂಗು ಕೇಳಿಬರುತ್ತಿವೆ.