ಮತ್ತೆ ಜಿಗಿಯಿತು ಚಿನ್ನ, ಬೆಳ್ಳಿ ಬೆಲೆ
ಹಿಂದಿನ ದಿನದ ವಹಿವಾಟಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನ ಮತ್ತು ಕುಸಿದಿದ್ದ ಬೆಳ್ಳಿ ದರ ಇಂದು ಜಿಗಿದಿವೆ. ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 500 ರೂ. ಹೆಚ್ಚಳವಾಗಿ 50,100 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 540 ರೂ. ಏರಿಕೆಯಾಗಿ 54,650 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 800 ರೂ. ಹೆಚ್ಚಳವಾಗಿ 70,100 ರೂಪಾಯಿ ಆಗಿದೆ.