ಅಂಚೆ ಇಲಾಖೆ ವತಿಯಿಂದ ಎಕ್ಸ್ಪ್ರೆಸ್ ಕಾರ್ಗೋ ಸೇವೆ ಪ್ರಾರಂಭ
ಉತ್ತರ ಕರ್ನಾಟಕದಲ್ಲೇ ಮೊತ್ತಮೊದಲ ಬಾರಿಗೆ ಬಾಗಲಕೋಟೆ ನಗರದಲ್ಲಿ ಪ್ರಧಾನ ಅಂಚೆ ಇಲಾಖೆ, ಭಾರತೀಯ ರೈಲು ಇಲಾಖೆ ವತಿಯಿಂದ ಎಕ್ಸಪ್ರೆಸ್ ಕಾರ್ಗೋ ಸರ್ವಿಸ್ ಗೆ ಚಾಲನೆ ನೀಡಲಾಯಿತು. ಇನ್ನು ಮುಂದೆ ರೈಲು ಮೂಲಕ ಅಂಚೆ ಇಲಾಖೆಯ ಪಾರ್ಸಲ್ ಕಳಿಸುವ ಮೂಲಕ ವೇಗವಾಗಿ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಅವರ ಆದೇಶದಂತೆ ಕಡಿಮೆ ದರದಲ್ಲಿ ವೇಗವಾಗಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದ ವಾಣಿಜ್ಯ ವ್ಯವಸ್ಥಾಪಕಿ ಹಾರೀಥಾ ಹೇಳಿದರು.