ಅನೈತಿಕ ಸಂಬಂಧವಾಗಿ ಪತಿಯನ್ನೇ ಕೊಲೆ ಮಾಡಿಸಿದ ಕಿರಾತಿಕ ಪತ್ನಿ....
ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ತನ್ನ ಪತಿಯನ್ನೇ ಸತಿಯೊಬ್ಬಳು ಕೊಲೆ ಮಾಡಿದ ಘಟನೆ ನಡೆದಿದ್ದು, ಇದಕ್ಕೆ ಅನೈತಿಕ ಸಂಬಂಧ ಕಾರಣವೆನ್ನಲಾಗಿದೆ.ಮುಳಮುತ್ತಲ ಗ್ರಾಮದಲ್ಲಿನ ಭೀಮಪ್ಪ ಸಿದ್ಧಣ್ಣವರ ಎಂಬಾತನನ್ನ ಈತನ ಪತ್ನಿ ಕಾವೇರಿ ಹಾಗೂ ಆಕೆಯ ಪ್ರಿಯಕರ ಶಿವು ನಿಂಬೋಜಿ ಕೂಡಿಕೊಂಡು ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ.ಭೀಮಣ್ಣನ ಸತಿ ಕಾವೇರಿ ಮದುವೆಯಾದ ನಂತರವೂ ಶಿವುನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದೇ ಕಾರಣಕ್ಕೆ ಪದೇ ಪದೇ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಹೀಗಾಗಿ ತನ್ನ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗರಗ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.....