ಅಫ್ರಿದಿ ಮಗಳನ್ನು ವರಿಸಿದ ಶಾಹೀನ್‌ ಅಫ್ರಿದಿ: ಅದ್ಧೂರಿ ವಿವಾಹಕ್ಕೆ ಸಾಕ್ಷಿಯಾದ ಸಹ ಆಟಗಾರರು

ಅಫ್ರಿದಿ ಮಗಳನ್ನು ವರಿಸಿದ ಶಾಹೀನ್‌ ಅಫ್ರಿದಿ: ಅದ್ಧೂರಿ ವಿವಾಹಕ್ಕೆ ಸಾಕ್ಷಿಯಾದ ಸಹ ಆಟಗಾರರು

ರಾಚಿ: ಪಾಕಿಸ್ತಾನದ ಯುವ ವೇಗಿ ಶಾಹೀನ್‌ ಅಫ್ರಿದಿ ಶುಕ್ರವಾರ ಅದ್ಧೂರಿ ವಿವಾಹ ಸಮಾರಂಭದಲ್ಲಿ ಪಾಕ್‌ ನ ಮಾಜಿ ಕಪ್ತಾನ ಶಾಹಿದ್ ಅಫ್ರಿದಿ ಅವರ ಮಗಳನ್ನು ವರಿಸಿದ್ದಾರೆ.

ಕರಾಚಿಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ಸದಸ್ಯರು ಸೇರಿದಂತೆ ಎರಡೂ ಕುಟುಂಬದ ಆಪ್ತರು ನೆರೆದಿದ್ದರು.

ಕಳೆದ ವರ್ಷದ ಶಾಹಿದ್‌ ಅಫ್ರಿದಿ ಅವರ ಪುತ್ರಿ ಅಕ್ಸಾ ಅವರೊಂದಿಗೆ ಶಾಹೀನ್‌ ಅವರ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಪಾಕಿಸ್ತಾನ ಸೂಪರ್ ಲೀಗ್ ತಂಡವಾದ ಲಾಹೋರ್‌ ಕಲಂದರ್ಸ್‌ ತಂಡ ಶಾಹೀನ್‌ ಅಫ್ರಿದಿ ಅವರ ವಿವಾಹ ಸಂಭ್ರಮದ ಫೋಟೋವನ್ನು ಟ್ವಿಟರ್‌ ನಲ್ಲಿ ಹಾಕಿ ನವ ಜೋಡಿಗೆ ಶುಭಕೋರಿದೆ.

ಬಾಬರ್‌ ಅಜಂ, ಸರ್ಫರಾಜ್ ಖಾನ್, ಶಾದಾಬ್ ಖಾನ್, ನಸೀಮ್ ಶಾ ಮುಂತಾದವರು ಮದುವೆಯಲ್ಲಿ ಭಾಗಿಯಾಗಿ ಜೋಡಿಗೆ ಶುಭಕೋರಿದೆ.

ಕಳೆದ ವರ್ಷದ ಟಿ-20 ಫೈನಲ್‌ ನಲ್ಲಿ ಮೊಣಕಾಲಿನ ಗಾಯದಿಂದ ಹೊರ ಬಿದ್ದಿರುವ ಶಾಹೀನ್‌ ಪಿಎಸ್‌ ಎಲ್‌ -8 ಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.