ಬೆಂಗಳೂರಿನಲ್ಲಿ ತಲೆ ಬುರುಡೆ ಕೇಸ್ ಪತ್ತೆಗೆ ಬಿಗ್ ಟ್ವಿಸ್ಟ್: ಒಂದೇ ಒಂದು ದಿನದಲ್ಲಿ ರಹಸ್ಯ ಬೇಧಿಸಿದ ಖಾಕಿ

ಬೆಂಗಳೂರಿನಲ್ಲಿ ತಲೆ ಬುರುಡೆ ಕೇಸ್ ಪತ್ತೆಗೆ ಬಿಗ್ ಟ್ವಿಸ್ಟ್: ಒಂದೇ ಒಂದು ದಿನದಲ್ಲಿ ರಹಸ್ಯ ಬೇಧಿಸಿದ ಖಾಕಿ

ಬೆಂಗಳೂರು: ನಗರದ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ದಿನಗಳ ಹಿಂದೆ ಕೊಳೆತ ಸ್ಥಿತಿಯಲ್ಲಿ ತಲೆಬುರುಡೆಯೊಂದಿಗಿನ ಅಸ್ಥಿಪಂಜರ ದೊರೆತಿತ್ತು. ಈ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಒಂದೇ ಒಂದು ದಿನದಲ್ಲಿ ತಲೆ ಬುರುಡೆ ಪತ್ತೆಯ ಹಿಂದಿನ ರಹಸ್ಯವನ್ನು ಪೊಲೀಸರು ಭೇಧಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬು ಅವರು, ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಷಯನಗರದಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದಂತ ತಲೆ ಬುರುಡೆ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಲಾಗಿ, ಪತ್ತೆಯಾದಂತ ಅಸ್ಥಿಪಂಜರವು 6 ತಿಂಗಳ ಹಿಂದೆ ನಾಪತ್ತೆಯಾಗಿದ್ದಂತ ನೇಪಾಳದ ಮಹಿಳೆಯದ್ದಾಗಿದೆ ಎಂದರು.

ಅಸ್ಥಿಪಂಜರದ ಬಳಿಯಲ್ಲಿ ಸಿಕ್ಕ ವಸ್ತುಗಳೆಲ್ಲವನ್ನು ಪರಿಶೀಲಿಸಲಾಗಿ, ಅವು ಕೂಡ ನಾಪತ್ತೆಯಾಗಿದ್ದಂತ ನೇಪಾಳದ ಮಹಿಳೆದ್ದಾಗಿವೆ. ನಾವು ಈಗ ಅಸ್ಥಿಪಂಜರವನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿಯನ್ನು ಕಾಯುತ್ತಿದ್ದೇವೆ ಎಂಬುದಾಗಿ ತಿಳಿಸಿದರು.

ಒಟ್ಟಾರೆಯಾಗಿ ಒಂದು ದಿನದ ಹಿಂದೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಷಯನಗರದ ಬಳಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಂತ ಅಸ್ಥಿಪಂಜರ ಯಾರದ್ದು ಎಂಬುದಾಗಿ ಒಂದೇ ದಿನದಲ್ಲಿ ಪತ್ತೆ ಹಚ್ಚಿ, ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ.