ಚಿಂತಾಮಣಿಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ: ಮೂವರ ಬಂಧನ
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 60 ಲಕ್ಷ ರೂಪಾಯಿಗೂ ಹೆಚ್ಚು ನಕಲಿ ಮುಖಬೆಲೆ ಖೋಟಾ ನೋಟುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.ಆಂದ್ರ ಕರ್ನಾಟಕ ಗಡಿನಾಡು ಚಿಂತಾಮಣಿ ನಗರದಲ್ಲಿ ಈ ಖೋಟಾ ನೋಟು ಜಾಲ ಪತ್ತೆಯಾಗಿದೆ.
ಖೋಟಾ ನೋಟು ಪ್ರಿಂಟ್ ಮಾಡಲು ಬಳಸಿದ್ದ ಯಂತ್ರೋಪಕರಣಗಳನ್ನು ಜಪ್ತಿ ಮಾಡಲಾಗಿದೆ.ಚಿಂತಾಮಣಿ ನಗರ ಹೊರವಲಯದಲ್ಲಿ ಬಾರ್ನ್ ಪೌಂಡೇಷನ್ ಪಾಳುಬಿದ್ದ ಕಟ್ಟಡದಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಚಿಂತಾಮಣಿ ಎಸ್ಪಿ ಕುಶಾಲ್ ಚೌಕ್ಸಿ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಅಸಲಿ ನೋಟುನ್ನು ಸ್ಕ್ಯಾನ್ ಮಾಡಿ ಅದೇ ಮಾದರಿಲ್ಲಿ ಕಲರ್ ಝೆರಾಕ್ಸ್ ಮಾಡುತ್ತಿದ್ದಾರು.