ಇಂದು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬೊಮ್ಮಾಯಿ ಚಾಲನೆ: ಹೂವುಗಳ ಲೋಕ ಸಾರ್ವಜನಿಕ ವೀಕ್ಷಣೆಗೆ ಲಭ್ಯ

ಇಂದು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬೊಮ್ಮಾಯಿ ಚಾಲನೆ: ಹೂವುಗಳ ಲೋಕ ಸಾರ್ವಜನಿಕ ವೀಕ್ಷಣೆಗೆ ಲಭ್ಯ

ಬೆಂಗಳೂರು: ಗಣರಾಜ್ಯೋತ್ಸವದ ಸಲುವಾಗಿ ಪ್ರತಿ ವರ್ಷ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತದೆ. ಅದರಂತೆ ನಗರದ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇಂದಿನಿಂದ 11 ದಿನಗಳ ಕಾಲ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಹೌದು 213ನೇ ವಿಶೇಷ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ಚಾಲನೆ ನೀಡಲಿದ್ದಾರೆ. ಈ ಮೂಲಕ ಸಸ್ಯಕಾಶಿ ಲಾಲ್ ಬಾಗ್ ನಲ್ಲಿನ ಫಲಪುಷ್ಪ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ವಿಶೇಷತೆ ಏನು ಗೊತ್ತಾ?

1500 ವರ್ಷಗಳ ಇತಿಹಾಸದ ಒಂದು ಇಣುಕುನೋಟವನ್ನು ಒದಗಿಸಲು, ಗಾಜಿನ ಮನೆಯೊಳಗಿನ ಕಲಾಕೃತಿಯು ಬೆಂಗಳೂರಿನ ಹಲವಾರು ಪ್ರಮುಖ ಮೈಲಿಗಲ್ಲುಗಳನ್ನು ಪ್ರತಿಬಿಂಬಿಸುತ್ತದೆ. ದುರ್ಗೆಯ ಮೇಲೆ ನಿರ್ಮಿಸಲಾದ ನಗರದ ಸಂಕೇತವಾದ 'ಗಿರಿ ದುರ್ಗಾ'ದ ಜೊತೆಗೆ, ಬೆಂಗಳೂರು, 300 ಮಿಲಿಯನ್ ವರ್ಷ ಹಳೆಯ ಲಾಬಾಗ್ ಬಂಡೆ, ರೋಮನ್ ಯುಗದ ನಾಣ್ಯಗಳ ಕಲಾಕೃತಿಗಳು, ದೊಡ್ಡ ಬಸವಣ್ಣ ಮತ್ತು ಕಾಡು ಮಲ್ಲೇಶ್ವರ ದೇವಾಲಯಗಳು, ವಿಧಾನಸೌಧದ ಕಲಾಕೃತಿಗಳನ್ನು ಮೊದಲು ಉಲ್ಲೇಖಿಸುವ ಬೇಗೂರು ಶಾಸನದ ಪ್ರತಿಕೃತಿಗಳು ಪ್ರದರ್ಶನದಲ್ಲಿ ಇರಲಿವೆ. ಆಂಥುರಿಯಂ, ಲಿಲ್ಲಿ, ಜರ್ಬೆರಾ, ಸೇವಂತಿಗೆ, ಆರ್ಕಿಡ್ ಗಳು ಮತ್ತು ಕಾರ್ನೇಷನ್ ಗಳಂತಹ ವಿವಿಧ ಹೂವುಗಳನ್ನು ಪ್ರತಿಷ್ಠಾಪನೆಗಳಲ್ಲಿ ಬಳಸಲಾಗುತ್ತದೆ.

ಇದಷ್ಟೇ ಅಲ್ಲದೇ ತೋಟಗಾರಿಕೆ ಇಲಾಖೆಯ ಲಾಲ್ ಬಾಗ್, ದೊಡ್ಡಸಾಗೆರೆ ಬಟಾನಿಕಲ್ ಗಾರ್ಡನ್, ಲಿಂಗಾಂಬೂದಿ ಬಟಾನಿಕಲ್ ಗಾರ್ಡನ್ ಸೇರಿದಂತೆ ವಿವಿಧ ಪ್ರಮುಖ ಆಕರ್ಷಣೆಗಳಿದ್ದಾವೆ.

ಇಷ್ಟು ಟಿಕೆಟ್ ದರ ನಿಗದಿ

ಈ ಬಾರಿಯ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಕಳೆದ ವರ್ಷದಂತೆ ರೂ.70 ಟಿಕೆಟ್ ದರ ನಿಗದಿ ಮಾಡಲಾಗಿದೆ. ರಜಾ ದಿನಗಳಂದು ರೂ.75 ಟಿಕೆಟ್ ನಿಗದಿ ಪಡಿಸಲಾಗಿದೆ. ಇನ್ನೂ ಮಕ್ಕಳಿಗೆ ತಲಾ ರೂ.30. ಶಾಲಾ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವಂತ ಶಾಲಾ ಮಕ್ಕಳಿಗೆ ಪೂರ್ಣ ಅವಧಿಯಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದೆ.