BIG NEWS: ರಾಜ್ಯದಲ್ಲಿನ ಮಳೆ, ಕೊರೋನಾ, ಜಲ ಗಂಡಾಂತರದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಕೋಡಿಮಠ ಶ್ರೀ.!
ಧಾರವಾಡ: ರಾಜ್ಯದಲ್ಲಿ ಕೆಳೆದ ಕೆಲ ದಿನಗಳಿಂದ ಸುರಿಯುತ್ತಿರುವಂತ ಮಹಾ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ನಿರಂತರವಾಗಿ ಸುರಿಯುತ್ತಿರುವಂತ ವರುಣನ ಆರ್ಭಟದ ಮುಂಜಾಗ್ರತಾ ಕ್ರಮವಾಗಿ ಅನೇಕ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೋಡಿಮಠದ ಸ್ವಾಮೀಜಿಗಳು, ರಾಜ್ಯದಲ್ಲಿ ಮಳೆಯ ಕಾಟ ಮುಗಿದಿಲ್ಲ. ಇನ್ನೂ ಇದೆ. ಇದು ಕಾರ್ತೀಕ ಮುಗಿಯೋವರೆಗೆ ಮುಂದುವರೆಯಲಿದೆ. ಕಾರ್ತೀಕ ಮುಗಿಯೋವರೆಗೆ ಮಳೆ ನಿಲ್ಲೋದಿಲ್ಲ ಎಂಬುದಾಗಿ ಶಾಕಿಂಗ್ ಭವಿಷ್ಯವನ್ನು ನುಡಿದಿದ್ದಾರೆ.
ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಲಿದೆ. ಪ್ರಕೃತಿ ವಿಕೋಪ ಹೆಚ್ಚೋ ಸಾಧ್ಯತೆಯಿದೆ. ಅನಾಹುತಗಳು ಹೆಚ್ಚಾಗಲಿವೆ. ಸಂಕ್ರಾತಿಯವರೆಗೆ ಮಳೆ ಮುಂದುವರೆಯಲಿದೆ. ಜಲಗಂಡಾಂತರ ಇದೆ. ಕೊರೋನಾ ಇನ್ನೂ ಹೆಚ್ಚಾಗಲಿದೆ. ಆದ್ರೇ ದೈವ ಕೃಪೆಯಿಂದ ಒಳ್ಳೆಯ ದಿನಗಳು ಬರಲಿವೆ ಎಂದರು.
ಇನ್ನೂ ಕುಂಭದಲ್ಲಿ ಗುರು ಅಂದ್ರೇ ತುಂಬುವವು ಕೆರೆ ಎಂದೇ ಹೇಳಲಾಗುತ್ತದೆ. ಕೆರೆ ಕಟ್ಟೆಗಳು ಮಳೆಯಿಂದ ತುಂಬಲಿವೆ. ಜಲಗಂಡಾಂತರ ಇನ್ನೂ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಏನೂ ಹೇಳೋದಿಲ್ಲ. ಅಶುಭ ನುಡಿಯಬಾರದು. ಕಾರ್ತೀಕ ಮಾಸ ಮುಕ್ತಾಯಗೊಂಡ ನಂತ್ರ ಹೇಳುವುದಾಗಿ ತಿಳಿಸಿದರು.