ಬಿಯಾಂಡ್ ಬೆಂಗಳೂರು" ಶೀರ್ಷಿಕೆಯಡಿ ಐಟಿ ಪಾಲಿಸಿ
ಹುಬ್ಬಳ್ಳಿ
ರಾಜ್ಯದಲ್ಲಿ ಎಲ್ಲ ಭಾಗದಲ್ಲಿಯೂ ತಂತ್ರಜ್ಞಾನ ಆವಿಷ್ಕಾರಗಳು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬುದೇ ಅಭಿಲಾಷೆಯಾಗಿದೆ ಎಂದು ಉನ್ನತ ಶಿಕ್ಷಣ ವಿಜ್ಞಾನ ಸಚಿವ ಅಶ್ವತ್ಥ ನಾರಾಯಾಣ ಹೇಳಿದರು. ನಗರದಲ್ಲಿ ಆಯೋಜಿಸಿದ್ದ ಬಿಯಾಂಡ್ ಬೆಂಗಳೂರು ಇನ್ನೋವೇಶನ್ ಆ್ಯಂಡ್ ಇಂಪ್ಯಾಕ್ಟ್ ಉದ್ಘಾಟನಾ ಕಾರ್ಯಕ್ರಮಕ್ಕೂ ಮುಂಚೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ ತಂತ್ರಜ್ಞಾನ ಮತ್ತು ಆವಿಷ್ಕಾರ ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿ ಪ್ರಗತಿ ಕಾಣಬಹುದು. ಈ ನಿಟ್ಟಿನಲ್ಲಿ "ಬಿಯಾಂಡ್ ಬೆಂಗಳೂರು" ಶೀರ್ಷಿಕೆಯಡಿ ಐಟಿ ಪಾಲಿಸಿ ಮಾಡಲಾಗುತ್ತದೆ. ಹಾಗಾಗಿ ಕರ್ನಾಟಕ ಡಿಜಿಟಲ್ ಆಡಿಯೊ ಎಕಾನಮಿ ಮಿಷನ್ ಸಂಸ್ಥೆ ಪ್ರಾರಂಭಿಸಲಾಗಿದೆ ಎಂದರು.