ಟಿ. ನರಸೀಪುರ ತಾಲೂಕಿನಲ್ಲಿ ಮುಂದುವರೆದ ಚಿರತೆ ಹಾವಳಿ: ದಾಳಿಯಿಂದ 11 ವರ್ಷದ ಬಾಲಕ ಸಾವು

ಟಿ. ನರಸೀಪುರ ತಾಲೂಕಿನಲ್ಲಿ ಮುಂದುವರೆದ ಚಿರತೆ ಹಾವಳಿ: ದಾಳಿಯಿಂದ 11 ವರ್ಷದ ಬಾಲಕ ಸಾವು

ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರೆದಿದೆ. ಚಿರತೆ ದಾಳಿಯಿಂದ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ.

ಇದೀಗ ಹೊರಳಹಳ್ಳಿಯಲ್ಲಿ ಚಿರತೆ ದಾಳಿಗೆ 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಜಯಂತ್‌ ಮೃತ ಬಾಲಕ. ಈತ ನಿನ್ನೆ ನಾಪತ್ತೆಯಾಗಿದ್ದನು. ಆದರೆ ಇಂದು ಗ್ರಾಮದ ಹೊರವಲಯದಲ್ಲಿ ರುಂಡವಿಲ್ಲದೆ ಬಾಲಕನ ಶವ ಪತ್ತೆಯಾಗಿದೆ. ರಾತ್ರಿ ಬಾಲಕನನ್ನು ಚಿರತೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ.ಇಂತಹ ಪ್ರಕರಣ ಮತ್ತೊಂದು ಸಲ ನಡೆದರೆ ಅರಣ್ಯ ಸಂರಕ್ಷಣಧಿಕಾರಿ ಮಾಲತಿ ಪ್ರಿಯ ಮೃತ ಬಾಲಕನ ತಾತ ಅಪ್ಪಯ್ಯಗೌಡ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇನ್ನೊಂದು ಸಾರಿ ಇಂತಹ ಪ್ರಕರಣ ನಡೆದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಅರಣ್ಯ ಸಂರಕ್ಷಣಧಿಕಾರಿ ಮಾಲತಿ ಪ್ರಿಯ ಮೃತ ಬಾಲಕನ ತಾತ ಅಪ್ಪಯ್ಯಗೌಡ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಚಿರತೆ ಓಡಾಡುತ್ತಿದೆ ಎಂದು ಎರಡು ಬಾರಿ ದೂರು ಕೊಟ್ಟಿದ್ದೇನೆ. ದೂರು ಕೊಟ್ಟರು ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.