ಭೀಕರ ಸಿಲಿಂಡರ್ ಸ್ಫೋಟ; ಮೂವರು ಮಕ್ಕಳು ಸೇರಿದಂತೆ 5 ಮಂದಿ ಸಾವು

ಭೀಕರ ಸಿಲಿಂಡರ್ ಸ್ಫೋಟ; ಮೂವರು ಮಕ್ಕಳು ಸೇರಿದಂತೆ 5 ಮಂದಿ ಸಾವು

ರಾಜಸ್ಥಾನದ ಜೋಧ್‌ಪುರ ಬಳಿ ಮದುವೆಯ ವೇಳೆ ಎರಡು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದು, ಸುಮಾರು 50 ಜನರು ಗಾಯಗೊಂಡಿದ್ದಾರೆ. ಜೋಧಪುರದ ಭುಂಗ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯ ಔತಣವನ್ನು ಸಿದ್ಧಪಡಿಸುತ್ತಿದ್ದ ಗ್ಯಾಸ್ ಸಿಲಿಂಡರ್‌ಗಳಲ್ಲಿ ಸೋರಿಕೆಯಾಗಿ ಪ್ರಬಲ ಸ್ಫೋಟಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.