ಕೊಪ್ಪಳ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ, ಜನರಲ್ಲಿ ಗರಿಗೆದರಿದ ಹೊಸ ಕನಸು

ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೆರೆ ಬಳಿಯ ನಾರಿನಾಳ ಪ್ರದೇಶದಲ್ಲಿ ಈ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವಿಜ್ಞಾನಗಳ ತಂಡದಿಂದ ನಡೆದಿದ್ದ ಶೋಧ ಕಾರ್ಯದ ವೇಳೆ ಈ ನಿಕ್ಣೇಪ ಪತ್ತೆಯಾಗಿದೆ. ಈಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ವಿಜ್ಞಾನಿಗಳು ಬೀಡುಬಿಟ್ಟಿರುವ ಬಿಟ್ಟಿದ್ದಾರೆ. ವಿಜ್ಞಾನಿಗಳು ನಾರಿನಾಳ ಬಳಿ ಪ್ರದೇಶದಲ್ಲಿ 113 ಅಡಿ ಆಳದಲ್ಲಿ ಚಿನ್ನದ ನಿಕ್ಷೇಪ ಪತ್ತೆ ಮಾಡಿದ್ದಾರೆ. 2017 ರಲ್ಲಿಯೇ ಇದೇ ಭಾಗದ ಮ್ಯಾದರಡೊಕ್ಕಿಯಲ್ಲಿ ಮ್ಯಾಂಗನೀಸ್ ಅದಿರು ಪತ್ತೆಯಾಗಿತ್ತು. ಜಿಯೋಲಾಜಿಕಲ್ ತಂಡದಿಂದ ನಾರಿನಾಳ ಬಳಿಯ ಚಿನ್ನದ ನಿಕ್ಷೇಪದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುತ್ತಿದ್ದಾರೆ. ಸದ್ಯ ಚಿನ್ನಸ ನಿಕ್ಣೇಪ ಪತ್ತೆಯಾಗಿರೋ ನಾರಿನಾಳ ಪ್ರದೇಶ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಿಂದ ಕೇವಲ ಸುಮಾರು 70 ಕಿಮೀ ದೂರದಲ್ಲಿದೆ.ಚಿನ್ನ ಭೂಗರ್ಭದಲ್ಲಿರುವದರಿಂದ ಜನತೆಯಲ್ಲಿ ಹೊಸ ನಿರೀಕ್ಷೆ ಉಂಟಾಗಿದೆ.