ಮಾರುಕಟ್ಟೆಯಲ್ಲಿ ಖರೀದಿ ಬಲು ಜೋರು
ನಾಡಿನ ಪ್ರಮುಖ ಹಬ್ಬವಾದ ದಸರಾ ಆಚರಣೆ ಜೋರಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದಸರಾದ ಆಯುಧ ಪೂಜೆಯ ಹಬ್ಬಕ್ಕೆ ಬೆಂಗಳೂರಿನ ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಭಾರಿ ಜನ ಸೇರಿದ್ದರು. ವಿವಿಧ ತರಕಾರಿ, ವಸ್ತುಗಳ ಖರೀದಿಗಾಗಿ ಜನ ಭಾರಿ ಪ್ರಮಾಣದಲ್ಲಿ ಸೇರಿದ್ದರು. ಆಯುಧ ಪೂಜೆಗೆ ಬೇಕಾಗುವ ಬಾಳೆಕಂದು, ಬೂದುಕುಂಬಳ, ಹೂವು, ಹಣ್ಣು, ಪುರಿ, ಸಿಹಿ ತಿನಿಸುಗಳ ಖರೀದಿ ಅಂಗಡಿಗಳಲ್ಲಿ ಜೋರಾಗಿ ನಡೆಯಿತು.