ಕಳ್ಳನ ಹೆಂಡತಿ ಯಾವತ್ತಿದ್ದು ಡ್ಯಾಷ್ ಡ್ಯಾಷ. ತಿಪ್ಪೆ ಕೆದಕಿದಷ್ಟು ಹೊಲಸೇ ಹೊರಬರುವಂತೆ

ಕಳ್ಳನ ಹೆಂಡತಿ ಯಾವತ್ತಿದ್ದು ಡ್ಯಾಷ್ ಡ್ಯಾಷ... ತಿಪ್ಪೆ ಕೆದಕಿದಷ್ಟು ಹೊಲಸೇ ಹೊರಬರುವಂತೆ, ಕೆದಿಕಿದರೆ ಡಿಕೆಶಿ ಮಾತ್ರವಲ್ಲ,ಇಡೀ ಕಾಂಗ್ರೆಸ್ ಪೂರ್ತಿ ಹೊಲಸೆ ಕಂಡು ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಗುಡುಗಿದ್ದಾರೆ. ಸದಾ ಬೇರೆ ಪಕ್ಷದವರನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರಾದ ಸಲೀಂ- ಉಗ್ರಪ್ಪ ಇದೀಗ ತಮ್ಮದೇ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿರುದ್ದ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರೇ ಗುಟ್ಟು ರಟ್ಟು ಮಾಡಿದ್ದಾರೆ. ಸಲೀಂ- ಉಗ್ರಪ್ಪ ದಡ್ಡರು ಎಂದು ನನಗೆ ಅನ್ನಿಸಲ್ಲ. ಗುಟ್ಟು ರಟ್ಟಾಗಲಿ ಎನ್ನುವ ಉದ್ದೇಶದಿಂದಲೇ, ಬೇಕೆಂತಲೇ ಗುಟ್ಟು ಮಾಡಿದ್ದಾರೆ. ಜಿ.ಪರಮೇಶ್ವರರನ್ನು ಯಾವ ಶಕ್ತಿ ಸೋಲಿಸಿತ್ತೋ, ಅದೇ ಶಕ್ತಿಯಿಂದ ಡಿ.ಕೆ.ಶಿಯನ್ನು ಬದಿಗೆ ಸರಿಯುವ ಸಂಚು ಮಾಡಿರೋದು ಸ್ಪಷ್ಟವಾಗಿದೆ. ಡಿ.ಕೆ.ಶಿ ಮಾತ್ರವಲ್ಲಕಾಂಗ್ರೆಸ್ಸೇ ಹೀಗಿದೆ. ಕೆದಕಿದರೇ ಇಡೀ ಕಾಂಗ್ರೆಸ್ ಪೂರ್ತಿ ಹೊಲಸೆ ಕಂಡು ಬರಲಿದೆ, ಕಳ್ಳನ ಹೆಂಡತಿ ಯಾವತ್ತಿದ್ರೂ ಡ್ಯಾಷ್. ಡ್ಯಾಷ್. ಎಂದು ಸಿಟಿ ರವಿ ಲೇವಡಿ ಮಾಡಿದರು. ಗೋವಾದಲ್ಲಿ ಬಿಜೆಪಿ ಮುಖಂಡ ಸಿ.ಟಿ. ರವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.