ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರಾಗಿ ಎಲ್.ಎಸ್.ಶ್ರೀಕಾಂತ್ ನೇಮಕ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ. ಬಿ. ಕೃಷ್ಣಪ್ಪ ಸಂಸ್ಥಾಪಿತ ಬಣಕ್ಕೆ ಚಿಕ್ಕಮಗಳೂರು ಘಟಕದ ನೂತನ ಜಿಲ್ಲಾ ಸಂಚಾಲಕರಾಗಿ ಎಲ್.ಎಸ್.ಶ್ರೀಕಾಂತ್ ಅವರನ್ನು ನೇಮಕ ಮಾಡಿ ಡಿ.ಎಸ್.ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ.
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೋ.ಬಿ. ಕೃಷ್ಣಪ್ಪ ಅವರ ಆಶಯಗಳನ್ನು ಈಡೇರಿಸುವ ಜತೆಗೆ ದಲಿತ ಸಮುದಾಯವನ್ನು ಜಾಗೃತಿಗೊಳಿಸಿ. ತತ್ವ ಸಿದ್ದಾಂತಗಳಿಗೆ ಬದ್ಧರಾಗುವ ಮೂಲಕ ಸಂಘಟನೆಯನ್ನು ಗಟ್ಟಿಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.