ಚಿಕ್ಕಮಗಳೂರಿನಲ್ಲಿ ಕೇವಲ 6 ಮತಗಳಿಂದ ಗೆದ್ದ ಬಿಜೆಪಿ ಅಭ್ಯರ್ಥಿ: ಜಿದ್ಧಾ-ಜಿದ್ಧಿನ ನಡುವೆಯೂ ಗೆಲುವು ಎಂ.ಕೆ.ಪ್ರಾಣೇಶ್

ಚಿಕ್ಕಮಗಳೂರಿನಲ್ಲಿ ಕೇವಲ 6 ಮತಗಳಿಂದ ಗೆದ್ದ ಬಿಜೆಪಿ ಅಭ್ಯರ್ಥಿ: ಜಿದ್ಧಾ-ಜಿದ್ಧಿನ ನಡುವೆಯೂ ಗೆಲುವು ಎಂ.ಕೆ.ಪ್ರಾಣೇಶ್

ಚಿಕ್ಕಮಗಳೂರು: ತೀವ್ರ ಜಿದ್ಧಾ-ಜಿದ್ದಿಗೆ ಪರಿಷತ್ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರ ಇಂದು ಸಾಕ್ಷಿಯಾಯಿತು. ಕಾಂಗ್ರೆಸ್ ವರ್ಸಸ್ ಬಿಜೆಪಿ ನಡುವೆ ನಡೆದಂತ ಸಖತ್ ಫೈಟ್ ನಲ್ಲಿಯೂ ಅಂತಿಮವಾಗಿ 6 ಮತಗಳ ಅಂತರದಿಂದ ಗೆಲುವನ್ನು ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಸಾಧಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಹಾಗೂ ಕಾಂಗ್ರೆಸ್ ಗಾಯತ್ರಿ ಶಾಂತೇಗೌಡ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆರಂಭದಿಂದಲೂ 30 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಮುನ್ನಡೆ ಸಾಧಿಸಿಕೊಂಡು ಬಂದಿದ್ದರು.

ಅಂತಿಮ ಸುತ್ತಿನ ಮತಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರನ್ನು ಕೇವಲ 6 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಗೆಲುವು ಸಾಧಿಸಿದ್ದಾರೆ. ತೀವ್ರ ಹಣಾಹಣಿಯ ನಡುವೆಯೂ ಬಿಜೆಪಿ ಕಾಫಿ ನಾಡಿನಲ್ಲಿ ಗೆಲುವು ಕಂಡಿದೆ.