6 ಸಾವಿರ ಕಿಲೋಮೀಟರ್ ಬೈಕ್ ಓಡ್ಸಿ, ಇತಿಹಾಸಕ್ಕೆ ಮುಂದಾದ ವಿಜೇತ
ಸಾಮಾನ್ಯವಾಗಿ ಎಲ್ಲ ಬೈಕರ್ಸ್ ಗಳಿಗೆ ಒಂದೇ ಒಂದು ಆಸೆ ಇರುತ್ತೆ. ಹೇಗಾದ್ರು ಮಾಡಿ ಲೇ ಲಡಾಖ್ ನ ಟ್ರಿಪ್ ಮಾಡಬೇಕು ಅನ್ನೋದು. ಅಲ್ಲಿನ ಕಿರಿದಾದ ರಸ್ತೆಯಲ್ಲಿ ದೊಡ್ಡ ದೊಡ್ಡ ಟು ವೀಲರ್ ಬೈಕ್ ಗಳನ್ನ ತೆಗೆದುಕೊಂಡು ಹೋಗ್ತಾರೆ. ಆದ್ರೆ ಧಾರವಾಡದ ಯುವಕನೊಬ್ಬ ತನ್ನ 97 ಸಿಸಿ ಯ ಮೇಲೆ 6 ಸಾವಿರ ಕಿಲೋಮೀಟರ್ ಕ್ರಮಸಿ ಇತಿಹಾಸ ಬರೆಯೋಕೆ ಸಜ್ಜಾಗಿದ್ದಾನೆ.ಕೋವಿಡ್ ಬಂದಾಗಿನಿಂದ ಸರ್ಕಾರ ಹಲವಾರು ರೀತಿಯಲ್ಲಿ ಲಸಿಕೆ ಕುರಿತು ಜಾಗೃತಿ ಮುಡಿಸುತ್ತಾ ಬಂದಿದೆ. ಆದ್ರೂ ಸಹ ಲಸಿಕೆ ಇನ್ನು ಕೆಲ ವರ್ಗಕ್ಕೆ ಸಿಕ್ಕಿಲ್ಲ. ಅದರಲ್ಲೂ ದಿನನಿತ್ಯ ದೂರದ ಊರುಗಳಿಗೆ ಸಂಚಾರ ಮಾಡುವ ಲಾರಿ ಡ್ರೈವರ್ಸ್, ಬುಡಕಟ್ಟು ಜನಾಂಗ ಇಂದಿಗೂ ಲಸಿಕೆಯಿಂದ ವಂಚಿತರಾಗಿದ್ದಾರೆ. ಅವರನ್ನ ಜಾಗೃತಿಗೊಳಿಸಬೇಕು ಅಂತಲೇ ಧಾರವಾಡದ ಯುವಕ ವಿಜೇತ ವಿನೂತನ ಜಾಥಾ ಮೂಲಕ ಜನರನ್ನ ಜಾಗೃತಿ ಮುಡಿಸುತ್ತಿದ್ದಾರೆ. ಹೌದು ಧಾರವಾಡದಿಂದ ಕನ್ಯಾಕುಮಾರಿ ವರೆಗೆ ಒಟ್ಟು 6 ಸಾವಿರ ಕಿಲೋಮೀಟರ್ ಗಳ ಪ್ರಯಾಣ ವನ್ನ ವಿಜೇತ ಹೊಸಮಠ ಮಾಡೋಕೆ ಸಿದ್ದರಾಗಿದ್ದು, ಈಗಾಗಲೇ ದಕ್ಷಿಣ ಭಾಗದ ದೆಹಲಿ, ಪಂಜಾಬ್, ಲೇ ಲಡಾಖ್ ಸೇರಿದಂತೆ ರಾಜಸ್ತಾನ ತುಂಬೆಲ್ಲ ಕನ್ನಡದ ಕಂಪನ್ನ ಪಸರಿಸುವ ಜೊತೆಗೆ ಕೋವಿಡ್ ಲಸಿಕೆ ಬಗ್ಗೆ ಲಾರಿ ಚಾಲಕರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.ಸಾಮಾನ್ಯವಾಗಿ ಲಾಂಗ್ ಜರ್ನಿ ಹೋಗಬೇಕು ಅಂದ್ರೆ ಹೆಚ್ಚು ಸಿಸಿ ಇರುವ ಬೈಕ್ ಗಳನ್ನ ಬೈಕರ್ಸ್ ತೆಗೆದುಕೊಂಡು ಹೋಗ್ತಾರೆ, ಬುಲೆಟ್, ಬೆನಿಲಿ, ಟ್ರಿಮ್ಫ್ ಟೈಗರ್ ಗಳಂತಹ ಬೈಕ ಗಳನ್ನ ಬಳಸಿ ಜರ್ನಿ ಆರಂಭ ಮಾಡ್ತಾರೆ. ಆದ್ರೆ ಈ ಯುವಕ ಮಾತ್ರ ತನ್ನ 97 ಸಿಸಿಯ ಸ್ಪೆನ್ದರ್ ಮೂಲಕ 4 ಸಾವಿರ ಕಿಮೀ ಜರ್ನಿಯನ್ನ ಅಂತ್ಯಗೊಳಿಸಿದ್ದು, ಇಷ್ಟೊಂದು ಸಣ್ಣ ಸಿಸಿಯ ಬೈಕ್ ನಲ್ಲಿ ಈ ರೀತಿ ಜರ್ನಿ ಮಾಡಿದ ವಿಶ್ವದ ಮೊದಲ ಬೈಕ್ ರೈಡರ್ ಎನ್ನುವ ಖ್ಯಾತಿ ಪಡೆದಿದ್ದಾರೆ. ಇದೆ ತಿಂಗಳ 8 ರಂದು ಜಾಥಾ ಆರಂಭಿಸಿದ್ದ ವಿಜೇತ ಇದೀಗ ಧಾರವಾಡಕ್ಕೆ ಆಗಮಿಸಿ ಮತ್ತೆ ಬೆಂಗಳೂರು ಮೂಲಕ ಕನ್ಯಾಕುಮಾರಿ ಪ್ರಯಾಣ ಬೆಳೆಸಲಿದ್ದಾರೆ ಒಟ್ಟಾರೆ ಸಣ್ಣ ಸಿಸಿ ಯ ಬೈಕ್ ಗಳನ್ನ ತೆಗೆದುಕೊಂಡು ಈ ರೀತಿಯ ವಿಶೇಷ ಸಾಧನೆಯ ಜೊತೆಗೆ ಲಸಿಕೆ ಜಾಗೃತಿಯನ್ನ ಮೂಡಿಸಿರುವ ನಮ್ಮ ಹೆಮ್ಮೆಯ ಧಾರವಾಡದ ಹುಡುಗನಿಗೆ ನಮ್ಮದೊಂದು ಬೆಸ್ಟ್ ವಿಶ್.