ಸುಸಜ್ಜಿತ ಆಧಾರ ಸೇವಾ ಕೇಂದ್ರ ಉದ್ಘಾಟಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್
ಧಾರವಾಡದಲ್ಲಿಂದು ಅತ್ಯಂತ ನೂತನ ಆಧಾರ ಕೇಂದ್ರ ಆರಂಭಗೊಂಡಿದೆ. ಉತ್ತರ ಕರ್ನಾಟಕದಲ್ಲಿಯೇ ಮೊದಲನೇಯದ್ದು ಎನ್ನಲಾದ ಸುಸಜ್ಜಿತ ಎನ್ನಲಾದ ಈ ಆಧಾರ ಕೇಂದ್ರ ವಿಭಿನ್ನವಾಗಿದೆ. ಥೇಟ್ ಪಾಸ್ ಪೋರ್ಟ್ ಕಚೇರಿ ಮಾಧರಿಯಲ್ಲಿ ಕಾರ್ಯನಿರ್ವಹಿಸುವ ಈ ಕೇಂದ್ರದಲ್ಲಿನ್ನು ಆಧಾರ ಪಡೆಯುವುದು ಸುಲಭ. ಇಂತಹ ಮಹತ್ವದ ಆಧಾರ ಕಚೇರಿಗೆ ಬುಧವಾರ ಧಾರವಾಡ ಜಿಲ್ಲಾಧಿಕಾರಿ ನಿತೀಶ ಪಾಟೀಲ್ ಚಾಲನೆ ನೀಡಿದರು. ಈ ಬಗ್ಗೆ ಫುಲ್ ಡಿಟೇಲ್ಸ್ ಇಲ್ಲಿದೆ. ಎಲ್ಲೆಡೆ ಜಗಮಗಿಸುವ ವಿದ್ಯುತ್ ದೀಪಗಳು. ಅಲ್ಲಲ್ಲಿ ಕಟ್ಟಲಾಗಿರೋ ಬಲೂನ್ ಗುಚ್ಚಗಳು. ಯೂನಿಫಾರ್ಮ ಧರಿಸಿ ಶಿಸ್ತಾಗಿ ಕರ್ತವ್ಯ ನಿರತ ಮಹಿಳಾ ಉದ್ಯೋಗಿಗಳು. ಕಂಪ್ಯೂಟರ್ ಕೀ ಬೋರ್ಡ್ ಮೇಲೆ ಕರಗಳಿಂದ ದಾಖಲೆ ಸಿದ್ದಗೊಳಿಸುತ್ತಿರೋ ಸಿಬ್ಬಂಧಿ. ಪ್ರತಿಯೊಂದನ್ನು ಅತ್ಯುತ್ಸಾಹದಿಂದ ಪ್ರೋತ್ಸಾಹ ನೀಡುವ ಕಚೇರಿಯ ಮುಖ್ಯಸ್ತರು. ನೋಡೋದಕ್ಕೆ ಥೇಟ್ ಪಾಸ್ ಕೇಂದ್ರದಂತೆ ಕಾಣುವ ಈ ಕಚೇರಿಯನ್ನು ಸರಕಾರ ಪರ ಕೆಲಸ ಮಾಡುವ ಆಧಾರ ಸೇವಾ ಕೇಂದ್ರ ಎಂದರೆ ಎಲ್ಲರೂ ನಂಬಲೇಬೇಕು. ಉತ್ತರ ಕರ್ನಾಟಕದಲ್ಲೇ ಮೊಟ್ಟ ಮೊದಲನೆಯದು ಎನ್ನಲಾದ ಈ ಸುಸಜಿತ ಆಧಾರ ಸೇವಾ ಕೇಂದ್ರಕ್ಕೆ ಧಾರವಾಡದಲ್ಲಿ ಚಾಲನೆ ನೀಡಲಾಯಿತು. ಅತ್ಯಾಧುನಿಕ ಈ ಆಧಾರ ಸೇವಾ ಕೇಂದ್ರಕ್ಕೆ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಬುಧವಾರ ಚಾಲನೆ ನೀಡಿದರು. ಕೇಂದ್ರ ಸರ್ಕಾರದ ಯೋಜನೆಯ ಅನ್ವಯ ಕಾರ್ಪರೇಟ್ ಕಚೇರಿಯೊಂದಕ್ಕೆ ಗುತ್ತಿಗೆ ನೀಡುವ ಮೂಲಕ ಇದನ್ನು ಸ್ಥಾಪಿಸಲಾಗಿದೆ. ಇದು ಥೇಟ್ ಕಾರ್ಪರೇಟ್ ಕಚೇರಿಯಂತೆಯೇ ಕಾಣಿಸುತ್ತಿದೆ. ಆನಲೈನ್ ಮೂಲಕ ಸಹ ನೋಂದಣಿ ಮಾಡಬಹುದಾದ ಈ ಕೇಂದ್ರದಲ್ಲಿ ಎಲ್ಲವೂ ಸರಳ. ಸಾಮಾನ್ಯ ಆಧಾರ ಕೇಂದ್ರಗಳಂತೆ ಜನರು ಸರದಿ ಸಾಲಿನಲ್ಲಿ ನಿಂತು ಗೋಳಾಡುತ್ತಾ, ಗೊಣಗುತ್ತಾ ಆಧಾರಗಾಗಿ ಪರದಾಡುವಂತಿಲ್ಲ. ಪಾಸ್ ಪೋರ್ಟ್ ಕಚೇರಿಗಳಂತೆ ಸುವ್ಯವಸ್ಥಿತವಾಗಿ ಇದು ಕೆಲಸ ಮಾಡುತ್ತದೆ. ನಾಲ್ಕೈದು ಕೌಂಟರ್ಗಳನ್ನು ತೆರೆಯಲಾಗಿದ್ದು, ಜನರು ಸುಲಭವಾಗಿ ಹೊಸದಾದ ಆಧಾರ ಕಾರ್ಡ್, ಅಥವಾ ತಿದ್ದುಪಡಿ ಕಾರ್ಡಗಳನ್ನು ಪಡೆಯಬಹುದಾಗಿದೆ. ಅದೂ ಕೂಡ ಜನರ ಕೈಗೆಟಕುವ, ಸರ್ಕಾರ ನಿರ್ಧರಿಸುವ ಅತಿ ಕಡಿಮೆ ಬೆಲೆಯಲ್ಲಿ. ಈ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದು, ಹೀಗೆ. ಈ ಕೇಂದ್ರದಲ್ಲಿ ಅತ್ಯಂತ ಸರಳವಾಗಿ ಹಾಗು ಸುಲಲಿತವಾಗಿ ಆಧಾರ ಕಾರ್ಡ ಸಿಗಲಿದೆ. ಆಧಾರನಲ್ಲಿ ಏನಾದರೂ ಸ್ಥಳದಲ್ಲಿಯೇ ಪರಿಹಾರ ಸಿಗಲಿದೆ. ಈ ಕೇಂದ್ರದಲ್ಲಿ ಸೇವೆ ಪಡೆದ ಮಹಿಳೆ ಛಾಯಾ ಹೇಳಿದ್ದು ಹೀಗೆ. ಛಾಯಾ , ಆಧಾರ ಕಾರ್ಡ ಮಾಡಿಸಲು ಬಂದಿದ್ದ ಮಹಿಳೆ, ಒಟ್ಟಾರೆಯಾಗಿ ನೂತನವಾಗಿ ಆರಂಭಿಸಲಾಗಿರೋ ಆಧಾರ ಸೇವಾ ಕೇಂದ್ರವು ಸಾಕಷ್ಟು ಸಿಬ್ಬಂಧಿ, ಕಂಪ್ಯೂಟರ್ , ಅವಶ್ಯಕ ಸಲಕರಣೆಗಳೊಂದಿಗೆ ಆರಂಭಗೊಂಡಿದೆ. ಕೇಂದ್ರ ಸರ್ಕಾರ ಯೋಜನೆಯಡಿ ಆರಂಭಗೊಂಡಿರೋ ಈ ಕಚೇರಿಯ ಸದುಪಯೋಗವನ್ನು ಪಡೆಯಲು ಜನರು ಮುಂದಾಗಬೇಕಿದೆ.