ಕೃಷಿ ಕಾಯ್ದೆ ವಾಪಸ್--ರೈತರಿಗೆ ಸಿಕ್ಕ ಜಯ

ವಿದ್ಯಾರ್ಥಿ ಸಂಘಟನೆ, ಕೃಷಿ ರೈತ ಕಾರ್ಮಿಕರ ಸಂಘಟನೆಯಿಂದ ಧಾರವಾಡ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಕಾಯ್ದೆಗಳ ಚರ್ಚಾ ಗೋಷ್ಟಿ ನಡೆಸಿದ್ರು. ಇನ್ನು ಆರ್ ಕೆ ಎಸ್ ಸಂಘಟನೆ ರಾಜ್ಯ ಕಾರ್ಯದರ್ಶಿ ಹೆಚ್ ವಿ ದಿವಾಕರ್ ಮಾತನಾಡಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.ಇದು ರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಆದರೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ,ಅಲ್ಲಿವರೆಗೂ ಕೂಡ ರೈತರ ಹೋರಾಟ ಮುಂದುವರೆಯಲಿದೆ,ಕೃಷಿ ಕಾಯ್ದೆಗಳು ರೈತರಿಗೆ ಅಷ್ಟೇ ಅಲ್ಲದೆ ದೇಶದ ಜನತೆಗೆ ಮಾರಕವಾಗಿವೆ ಈ ಕಾಯ್ದೆಗಳು ಸಂಪೂರ್ಣ ರದ್ದಾಗುವ ವರೆಗೂ ಹೋರಾಟ ಮುಂದುವರೆಯಲಿದೆ ಎಂದು. ಹೇಳಿದರು.